ಮೃಗಾಲಯದಲ್ಲಿ ಜೀಬ್ರಾ ಹೆಣ್ಣು ಮರಿ ಜನನ

Promotion

ಮೈಸೂರು,ಅಕ್ಟೋಬರ್,24,2020: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಅಕ್ಟೋಬರ್ 16ರಂದು ಪ್ರಾಚಿ ಹೆಸರಿನ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ.

ಪ್ರಾಚಿ ಮತ್ತು ರಿಷಿ ಜೀಬ್ರಾಗಳಿಗೆ ಜನ್ಮಿಸಿರುವ ಈ ಮರಿಯು ಮೈಸೂರು ಮೃಗಾಲಯದ ಇತಿಹಾಸದಲ್ಲಿ ಮೂರನೇ ಜೀಬ್ರಾ ಮರಿಯಾಗಿದೆ. ಇದನ್ನು ಒಳಗೊಂಡಂತೆ 3 ಗಂಡು ಮತ್ತು 4 ಹೆಣ್ಣು ಜೀಬ್ರಾಗಳು ಮೈಸೂರು ಮೃಗಾಲಯದಲ್ಲಿವೆ.

ಈ ಹೊಸ ಮರಿಯು ಮೈಸೂರು ಮೃಗಾಲಯದ ಕುಟುಂಬಕ್ಕೆ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತೇವೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.