“ಹುಷಾರಾಗಿರಿ ಆಪರೇಷನ್ ಕಮಲ ಮಾಡ್ತಾರೆ” : ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ…!

Promotion

ಬೆಂಗಳೂರು,ಜನವರಿ,04,2021(www.justkananda.in)  : ರಾಜ್ಯದಲ್ಲಿ ಕೆಟ್ಟ ಸರ್ಕಾರ ಅಧಿಕಾರದಲ್ಲಿದ್ದು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಹುಶಾರಾಗಿರಿ ಆಪರೇಷನ್ ಕಮಲ ಮಾಡ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.jk-logo-justkannada-mysore

ಇವರಪ್ಪನ ಮನೆಯಿಂದ ಕೊಡ್ತಾರ…!

ನಾನು ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ನಿಲ್ಲಿಸುವ ಕಾರ್ಯಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಮುಚ್ಚಿಸಲು ಪ್ರಯತ್ನಿಸಿದರು. ಇವಾಗ 7 ಕೆ.ಜಿ ನೀಡುತ್ತಿದ್ದ ಅಕ್ಕಿಯನ್ನು 5 ಕೆ.ಜಿಗೆ ಇಳಿಸಲು ಮುಂದಾಗಿದ್ದಾರೆ. ಇವರಪ್ಪನ ಮನೆಯಿಂದ ಕೊಡ್ತಾರ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪಗೆ ಮಾನ,ಮರ್ಯಾದೆ ಇದೆಯಾ?

ನಾನು ಬಡವರ, ರೈತರ ಪರ ಎನ್ನವ ಬಿ.ಎಸ್.ಯಡಿಯೂರಪ್ಪ ಒಂದು ರೂಪಾಯಿ ಸಾಲಮನ್ನಾ ಮಾಡಿಲ್ಲ. ಗ್ರಾಪಂ ಚುನಾವಣೆ ಪಕ್ಷದ ಮೇಲೆ ನಡೆಯುವ ಚುನಾವಣೆಯಲ್ಲ. ಆದರೆ, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗ ಸದಸ್ಯರು ಶೇ.60ರಷ್ಟು ಅಭ್ಯರ್ಥಿಗಳು ಗೆದಿದ್ದಾರೆ ಎಂದು ಹೇಳುವ ಬಿ.ಎಸ್.ಯಡಿಯೂರಪ್ಪಗೆ ಮಾನ,ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.Be careful,Operation,kamala,Modtare,Former,C.M. Siddaramaiah,Warning ...!

siddaramaih#profile..ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷವಾಗಿದೆ ಗ್ರಾಪಂ ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿಲ್ಲ. ಲಜ್ಜೆಗೆಟ್ಟ ಸರ್ಕಾರದ ಎದುರು ವಿರೋಧ ಪಕ್ಷದಲ್ಲಿ ಏನು ಮಾಡಲಾಗುತ್ತೆ ಹೇಳಿ ಎಂದು ಬೇಸರವ್ಯಕ್ತಪಡಿಸಿದ್ದಾರೆ.

key words : Be careful-Operation-kamala-Modtare-Former-C.M. Siddaramaiah-Warning …!