14ರಿಂದ ಅಮೆಜಾನ್ ಪ್ರೈಂ ವಿಡಿಯೊದಲ್ಲಿ ‘ಅವತಾರ ಪುರುಷ’

Promotion

ಬೆಂಗಳೂರು, ಜೂನ್ 10, 2020 (www.justkannada.in): ಸಿಂಪಲ್‌ ಸುನಿ ನಿರ್ದೇಶನದ ಶರಣ್‌-ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಸಿನಿಮಾ, ಜೂನ್‌ 14ರಿಂದ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ರಿಲೀಸ್ ಆಗಲಿದೆ.

ನಿರ್ದೇಶಕ ಸಿಂಪಲ್‌ ಸುನಿ ಅವರ ಹೊಸ ಪ್ರಯೋಗ ‘ಅವತಾರ ಪುರುಷ ಕಳೆದ ಮೇ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಜೂನ್‌ 14ರಿಂದ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಪೌರಾಣಿಕ ಕಥೆಯ ಎಳೆಯನ್ನು ಹಿಡಿದು ಮಾಟ, ಮಂತ್ರ, ವಾಮಾಚಾರ ವಿಷಯವನ್ನು ಸುನಿ ಹೇಳಿದ್ದರು. ಶರಣ್‌-ಆಶಿಕಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು.

. ಸಾಯಿಕುಮಾರ್‌, ಶ್ರೀನಗರ ಕಿಟ್ಟಿ, ಸುಧಾರಾಣಿ, ಅಶುತೋಷ್‌ ರಾಣಾ, ಬಾಲಾಜಿ ಮನೋಹರ್, ಬಿ.ಸುರೇಶ್‌  ಸೇರಿದಂತೆ ಪ್ರಮುಖ ತಾರಾಗಣ ಚಿತ್ರದಲ್ಲಿದೆ.