ಆಸಿಸ್ ವಿರುದ್ಧ ಟೀಂ ಇಂಡಿಯಾ ಡೇ ನೈಟ್ ಟೆಸ್ಟ್ ಮ್ಯಾಚ್

Promotion

ಬೆಂಗಳೂರು, ಫೆಬ್ರವರಿ 17, 2020 (www.justkannada.in): ಟೀಮ್ ಇಂಡಿಯಾ ಮತ್ತೊಂದು ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲು ಸಿದ್ಧವಾಗಿದೆ.

ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೇ ಸ್ಪಷ್ಟಪಡಿಸಿದ್ದಾರೆ. ಆಸಿಸ್ ವಿರುದ್ಧ ಟೀಮ್ ಇಂಡಿಯಾ ಅಹರ್ನಿಶಿ ಪಂದ್ಯವನ್ನಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ಆಸಿಸ್ ನೆಲಕ್ಕೆ ಭಾರತ ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ.