ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆದಿರುವುದು ನೋವಿನ ಸಂಗತಿ- ವಿಷಾದ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ…

Promotion

ಮೈಸೂರು,ನ,18,2019(www.justkannada.in):   ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆದಿರುವುದು ನೋವಿನ ಸಂಗತಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿಷಾದ ವ್ಯಕ್ತಪಡಿಸಿದರು.

ಶಾಸಕ ತನ್ವೀರ್ ಸೇಠ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ  ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಿನ್ನೆ ರಾತ್ರಿ ಮದುವೆ ಸಮಾರಂಭ ನಡೆದ ಘಟನೆ ಅತ್ಯಂತ ದುಃಖ ಸಂಗತಿ. ಶಾಂತಿಯುತ ನಗರದಲ್ಲಿ ಜನಪ್ಈಯ ಶಾಸಕರ ಮೇಲೆ ನಡೆದಿರುವ ಹಲ್ಲೆ ದಿಗ್ಬ್ರಮೆ ತಂದಿದೆ. ತನ್ವೀರ್ ಸೇಠ್ ಎಲ್ಲರ ಜೊತೆ ಸ್ನೇಹ, ವಿಶ್ವಾಸ ದಿಂದ ಇದ್ದರು. ಇಂತವರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ನರಸಿಂಹರಾಜ ಕ್ಷೇತ್ರದಲ್ಲಿ ರಾಜು ಕೊಲೆ ಸೆರಿದಂತೆ ಇಂತಹ ಘಟನೆಗಳು ನಡೆಯುತ್ತವೆ. ಪೊಲೀಸ್ ಇಲಾಖೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಮಿಂಗ್ ಆಪರೇಷನ್ ಮಾಡಬೇಕು. ಅಲ್ಲಿರುವ ರೋಗ್ ಎಲಿಮೆಂಟ್ ಗಳನ್ನು ಮಟ್ಟ ಹಾಕುವಂತೆ ಪೊಲೀಸ್ ಇಲಾಖೆಗೆ  ಮನವಿ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ತನ್ವೀರ್ ಸೇಠ್ ಅವರ ಪತ್ನಿ ಜೊತೆಗೆ ಮಾತನಾಡಿದ್ದೇನೆ. ಅವರು ತುಂಬಾ ಗಾಬರಿಯಾಗಿದ್ದಾರೆ. ತನ್ವೀಸೇಠ್ ಕತ್ತಿನ ಭಾಗದಲ್ಲಿ ರಕ್ತಸ್ರಾವ ಬಹುತೇಕ ನಿಂತಿದೆ. ಹೆಚ್ಚಿನ ನಿಗಾ ವಹಿಸುವ ದೃಷ್ಟಿಯಿಂದ ಐಸಿಯುನಲ್ಲಿ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ತನ್ವೀರ್ ಸೇಠ್ ಬೇಗ ಗುಣಮುಖರಾಗಲೇಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Key words: attack –MLA-Tanveer Saith-  Pratap simha-visit- hospital