ಕೊರೊನಾ ಭೀತಿಯ ನಡುವೆ ನಾಳೆಯಿಂದ ನಮ್ಮ ಮೆಟ್ರೋ ರೈಲು ಆರಂಭ

ಬೆಂಗಳೂರು, ಸೆಪ್ಟೆಂಬರ್, 06,2020(www.justkannda.in) : ನಮ್ಮ ಮೆಟ್ರೋ ರೈಲು ಕೊರೊನಾ ಭೀತಿಯ ನಡುವೆಯೂ ನಾಳೆ ಆರಂಭವಾಗಲಿದ್ದು, ಸಕಲ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ.

ಕೊರೊನಾದಿಂದಾಗಿ ಮಾ.22ರಿಂದ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ, ಸತತ ಐದು ತಿಂಗಳ ಬಳಿಕ ಸೋಮವಾರ ಸಂಚಾರ ಆರಂಭಿಸಲು ಮುಂದಾಗಿದೆ.

jk-logo-justkannada-logo

ಮೊದಲಿಗೆ ನೇರಳೆ ಮಾರ್ಗದಲ್ಲಿ ಮಾತ್ರ ಸಂಚಾರ

ಕೊರೊನಾ ಮುನ್ನೆಚರಿಕೆ ಕ್ರಮವಾಗಿ ಕೇವಲ ಒಂದು ಮಾರ್ಗ(ನೇರಳೆ ಮಾರ್ಗ) ದಲ್ಲಿ ಮಾತ್ರ ಬೆಳಗ್ಗೆ 8ಗಂಟೆಗೆ ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆ ಮತ್ತು ಮೈಸೂರು ರಸ್ತೆ-ಬೈಯ್ಯಪ್ಪನಹಳ್ಳಿ ನಡುವೆ ರೈಲು ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಬೆಳಗ್ಗೆ 8 ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ತಲಾ 5 ನಿಮಿಷಗಳ ಅಂತರದಲ್ಲಿ ರೈಲುಗಳು ಕಾರ್ಯನಿರ್ವಹಿಸಲಿವೆ.

ಸ್ಮಾರ್ಟ್ ಕಾರ್ಡ್ ಗಳಿಂದ ಮಾತ್ರ ಪ್ರಯಾಣ

ಸೆ.7ರಿಂದ 10ರವರೆಗೆ ನೇರಳೆ ಮಾರ್ಗದಲ್ಲಿ ಮಾತ್ರ ಮೆಟ್ರೋ ರೈಲು ಸಂಚರಿಸಲಿದ್ದು, ಸೆ.9 ಮತ್ತು 10 ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಬಳಿಕ ಎರಡೂ ಮಾರ್ಗದಲ್ಲಿ ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಟೋಕನ್ ಮಾರಾಟಕ್ಕೆ ಅನುಮತಿ ಇಲ್ಲದ ಕಾರಣ ಸ್ಮಾರ್ಟ್ ಕಾರ್ಡ್ ಗಳಿಂದ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಆರು ಬೋಗಿಗಳ ಒಂದು ಮೆಟ್ರೋ ರೈಲಿನಲ್ಲಿ ಕೇವಲ 400 ಜನರು ಏಕಕಾಲದಲ್ಲಿ ಪ್ರಯಾಣಿಸಬಹುದಾಗಿದೆ.

 Amid-corona-horror-Tomorrow's-ours-Metro-train-start

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ಆ್ಯಪ್ ಅಭಿವೃದ್ಧಿಪಡಿಸಿದ್ದು, ಶನಿವಾರ ಸಂಜೆ ಬಿಡುಗಡೆ ಮಾಡಿದ್ದು, ಭಾನುವಾರ (ಸೆ.6)ದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಿದೆ.  ಪ್ಲೇಸ್ಟೋರ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ನೋಂದಣಿ ಮಾಡಿದರೆ ಮೊಬೈಲ್ ಗೆ ಓಟಿಪಿ ಬರಲಿದೆ. ಈ ಆ್ಯಪ್ ನಲ್ಲಿ ಐದು ಸ್ಮಾರ್ಟ್ ಕಾರ್ಡ್ ಗಳನ್ನು ಸೇವ್ ಮಾಡಿ ಆನ್ ಲೈನ್ ಮೂಲಕವೇ ಟಾಪ್ ಆಪ್ ಮಾಡಲು ಅವಕಾಶವಿದೆ.

ಆ್ಯಪ್ ನಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳನ್ನು ಸಂಚಾರದ ಸಮಯ, ಎಷ್ಟು ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣಿಸಲು ನಿಗದಿಪಡಿಸಲಾದ ಶುಲ್ಕ ಇತ್ಯಾದಿ ಮಾಹಿತಿಗಳು ಆ್ಯಪ್ ನಲ್ಲಿ ಅಳವಡಿಸಲಾಗುವುದು ಎಂದು ಬಿಎಂಆರ್ ಸಿ ಎಲ್ ಉಪ ಪ್ರಧಾನ ವ್ಯವಸ್ಥಾಪಕ (ಐಟಿ) ರಂಗನಾಥ್ ದೇಶಪಾಂಡೆ ಮಾಹಿತಿ ನೀಡಿದ್ದಾರೆ.

key words : Amid-corona-horror-Tomorrow’s-ours-Metro-train-start