ನಡತೆ ಶಂಕಿಸಿ ಪತಿಯಿಂದ ಕಿರುಕುಳ ಆರೋಪ: ಪತ್ನಿ ಆತ್ಮಹತ್ಯೆಗೆ ಶರಣು…

Promotion

ಮೈಸೂರು,ಮಾರ್ಚ್,16,2021(www.justkannada.in):  ನಡೆತೆ ಶಂಕಿಸಿ ಪತಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ  ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.jk

ಮೈಸೂರು ಜಿಲ್ಲೆ ಕೆ.ಆರ್ ನಗರ ಮೂಲದ ಬಿಂದುಶ್ರೀ ಆತ್ಮಹತ್ಯೆಗೆ ಶರಣಾಗಿರುವ ಪತ್ನಿ. ಪತಿ ಚಂದ್ರ ಶೇಖರ್ ವಿರುದ್ಧ ಪತ್ನಿಯ ನಡತೆ ಶಂಕಿಸಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಗಂಡನ ಕಿರುಕುಳ ತಾಳಲಾರದೆ ಬಿಂದುಶ್ರೀ ತವರು ಮನೆಗೆ ಬಂದಿದ್ದರು.accused-harassment-husband-wife-suicide-kr-nagara

ಈ ನಡುವೆ ಮತ್ತೆ ಜತೆಗಿರೋಣ ಎಂದು  ಬಿಂದುಶ್ರೀ ಇದ್ದಲ್ಲಿಗೆ ಬಂದು ಅಲ್ಲಿಯೂ ಸಹ ಚಂದ್ರ ಶೇಖರ್ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಪತ್ನಿ ಬಿಂದುಶ್ರೀ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಕುರಿತು ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Accused – harassment – husband-Wife – suicide-kr nagara