68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಡೊಳ್ಳು’ ಆಯ್ಕೆ.

Promotion

ನವದೆಹಲಿ,ಜುಲೈ,22,2022(www.justkannada.in): 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟ ಮಾಡಲಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಗೆ ಅಜಯ್ ದೇವಗನ್ ಮತ್ತು ಸೂರ್ಯ ಭಾಜನರಾಗಿದ್ದಾರೆ.

2020ನೇ ಸಾಲಿನ ಸಿನಿಮಾಗಳಿಗೆ  ಇಂದು ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿದೆ.  ‘ಡೊಳ್ಳು’ ಸಿನಿಮಾ ‘ಕನ್ನಡದ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಪಡೆದಿದೆ. ಈ ಚಿತ್ರಕ್ಕೆ ಸಾಗರ್​ ಪುರಾಣಿಕ್​ ನಿರ್ದೇಶನ ಮಾಡಿದ್ದು, ಪವನ್​ ಒಡೆಯರ್​ ಮತ್ತು ಅಪೇಕ್ಷಾ ಪುರೋಹಿತ್​ ನಿರ್ಮಾಣ ಮಾಡಿದ್ದಾರೆ. ‘ದ ಲಾಂಗೆಸ್ಟ್​ ಕಿಸ್’​ ಪುಸ್ತಕಕ್ಕೆ ‘ಸಿನಿಮಾ ಕುರಿತು ಅತ್ಯುತ್ತಮ ಕೃತಿ’ ಪ್ರಶಸ್ತಿ ನೀಡಲಾಗಿದೆ.

ಅಜಯ್​ ದೇವಗನ್​ (ತಾನಾಜಿ: ದಿ ಅನ್​ಸಂಗ್​ ಹೀರೋ) ಹಾಗೂ ಸೂರ್ಯ (ಸೂರರೈ ಪೋಟ್ರು) ‘ಅತ್ಯುತ್ತಮ ನಟ’ ಪ್ರಶಸ್ತಿ ಹಂಚಿಕೊಂಡಿದ್ದಾರೆ. ‘ಸೂರರೈ ಪೋಟ್ರು’ ಚಿತ್ರದಲ್ಲಿನ ನಟನೆಗಾಗಿ ಅಪರ್ಣಾ ಬಾಲಮುರಳಿ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 30 ಭಾಷೆಗಳ 300 ಫೀಚರ್​ ಫಿಲ್ಮ್​, 150 ನಾನ್​-ಫೀಚರ್​ ಫಿಲ್ಮ್​ ಸೇರಿ 400ಕ್ಕೂ ಅಧಿಕ ಸಿನಿಮಾಗಳು ಅರ್ಜಿ ಸಲ್ಲಿಸಿದ್ದವು.

Key words: 68th– National Film- Awards- Announced ‘Dollu’ – Best -Kannada- Film- Award.