ಕರ್ನಾಟಕದಲ್ಲಿ ಕೋವಿಡ್ ಲಸಿಕೆ ಪಡೆದ 13,768 ಮಂದಿಗೆ ಮತ್ತೆ ಸೋಂಕು

Promotion

ಬೆಂಗಳೂರು, ಆಗಸ್ಟ್ 22, 2021 (www.justkannada.in): ಕರ್ನಾಟಕದಲ್ಲಿ ಕೋವಿಡ್ ಲಸಿಕೆ ಪಡೆದ ಒಟ್ಟು 13,768 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅಂಕಿ ಅಂಶಗಳು ಈ ವಿಷಯವನ್ನು ಖಚಿತ ಪಡಿಸಿವೆ. ಲಸಿಕೆ ಪಡೆದ ಒಟ್ಟು ಸೋಂಕಿತರ ಪೈಕಿ 13,768 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಕೊವಿಶೀಲ್ಡ್​ ಲಸಿಕೆ ಪಡೆದ 11,150 ಜನರು ಹಾಗೂ ಕೊವ್ಯಾಕ್ಸಿನ್ ಲಸಿಕೆ​ ಪಡೆದ 2,618 ಜನರು ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮೊದಲ ಡೋಸ್ ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ 9,030 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಎರಡೂ ಡೋಸ್ ಲಸಿಕೆ ಕೊವಿಶೀಲ್ಡ್​​ ಲಸಿಕೆ ಪಡೆದ 2,120 ಜನರಿಗೆ ಕೊವಿಡ್ ದೃಢಪಟ್ಟಿದೆ.