ಹೆಂಡತಿ ತವರಿಗೆ ತೆರಳಿದ್ದಕ್ಕೆ ಗಂಡ ಆತ್ಮಹತ್ಯೆಗೆ ಶರಣು.

Promotion

ಮೈಸೂರು,ಜನವರಿ,3,2022(www.justkannada.in): ಹೆಂಡತಿ ತವರಿಗೆ ತೆರಳಿದ ಹಿನ್ನೆಲೆ,  ಗಂಡ ನೇಣಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರಿನ ಸಾಗರಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಾಜಿದ್ ಪಾಷಾ(38)ಮೃತ ದುರ್ದೈವಿ. ವಾಜಿದ್ ಪಾಷಾ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ಮೂರು ವರ್ಷಗಳ ಹಿಂದೆ ಮಹದೇವಪುರದ ಹಸೀನಾ ಬಾನು ಎಂಬಾಕೆಯನ್ನ ವಿವಾಹವಾಗಿದ್ದ. ಆದರೆ ಈ ದಂಪತಿಗೆ ಮಕ್ಕಳಿರಲಿಲ್ಲ.

ಈ ಮಧ್ಯೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಗಂಡನ ವರ್ತನೆಗೆ ಬೇಸತ್ತ ಹಸೀನಾ ಭಾನು ತವರು ಮನೆ ಸೇರಿದ್ದಳು. ಪತ್ನಿಯನ್ನ ವಾಪಸ್ ಕರೆತರಲು ವಾಜಿದ್ ಪಾಷ ಯತ್ನಿಸಿ ವಿಫಲನಾಗಿದ್ದ. ಪತ್ನಿ ದೂರವಾದ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಾಜಿದ್ ಪಾಷಾ, ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು ಈ ಕುರಿತು ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore- Husband- commits- suicide – wife-home