ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣು.

Promotion

ಮೈಸೂರು,ಡಿಸೆಂಬರ್,27,2021(www.justkannada.in): ಸಾಲ ಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೆ.ಆರ್.ನಗರ ತಾಲೂಕಿನ ಸಾಲೇಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಎಸ್.ಆರ್.ಸುಕನ್ಯ (55) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ.  ಸುಕನ್ಯ ಹೊಸೂರು ಸಹಕಾರ ಸಂಘದಲ್ಲಿ 60 ಸಾವಿರ ಕೈ ಸಾಲವಾಗಿ 5 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು.

ಒಂದು ಎಕರೆ 39 ಗುಂಟೆ ಜಮೀನು ಹೊಂದಿದ್ಧ ರೈತ ಮಹಿಳೆ ಸುಕನ್ಯ ತರಕಾರಿ,ಶುಂಠಿ, ಭತ್ತದ ಬೆಳೆಗಳನ್ನ ಬೆಳೆದಿದ್ದರು. ಆದರೆ ಬೆಳೆಗಳು ಕೈ ಕೊಟ್ಟ ಪರಿಣಾಮವಾಗಿ  ಸುಕನ್ಯ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: farmer –woman-commits –suicide- after – debt.