ಪರಿಷತ್ ಚುನಾವಣೆಯಲ್ಲಿ 11 ಕಡೆ ಕಾಂಗ್ರೆಸ್ ಗೆಲುವು: ಮಾಜಿ ಸಿಎಂ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ಧು ಹೀಗೆ.

Promotion

ಬೆಳಗಾವಿ,ಡಿಸೆಂಬರ್,14,2021(www.justkannada.in):  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುತೇಕ  ಹೊರಬಿದ್ದಿದ್ದು ಬಿಜೆಪಿ 12 ಕಾಂಗ್ರೆಸ್ 11 ಜೆಡಿಎಸ್ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಇಡೀ ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಅಲೆ ಇದೆ. ರಾಜ್ಯದ ಜನತೆಗೆ ಬಿಜೆಪಿ ಆಡಳಿತ ಬೇಡವಾಗಿದೆ. ಹಾಗಾಗಿ ಪರಿಷತ್‌ ಚುನಾವಣೆಯಲ್ಲಿ 25 ಕ್ಷೇತ್ರಗಳ ಪೈಕಿ 11 ಸ್ಥಾನಗಳು ಕಾಂಗ್ರೆಸ್‌ ಪಾಲಾಗಿವೆ. ಬೆಳಗಾವಿಯಲ್ಲಿ ನಾವೇ ನಂಬರ್‌ ಒನ್‌. ಬೆಳಗಾವಿಯಲ್ಲಿ ಬಿಜೆಪಿಯನ್ನ ಸೋಲಿಸಿದ್ದು ರಮೇಶ್‌ ಜಾರಕಿಹೊಳಿ  ಬಾಲಚಂದ್ರ ಜಾರಕಿಹೊಳಿ. ಬಿಜೆಪಿ ಸೋಲಿಸಲೆಂದೇ ಅಭ್ಯರ್ಥಿ ಹಾಕಿದ್ರು. ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾನೆ ಅಂದ್ರೆ ಬಿಜೆಪಿಗೆ ಧಮ್ ಇಲ್ಲ ಅಂತಾ ಆಯಿತು. ಇದು ಚುನಾಯಿತ ಪ್ರತಿನಿಧಿಗಳ ತೀರ್ಪು.  ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಮುಂದೆಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪರಿಷತ್‌ ಚುನಾವಣೆಯಲ್ಲಿ ಗೆಲವು ಸಾಧಿಸಿದ ಎಲ್ಲ ಕಾಂಗ್ರೆಸ್‌ ಆಭ್ಯರ್ಥಿಗಳಿಗೆ ಸಿದ್ಧರಾಮಯ್ಯ ಆಭಿನಂದನೆ ಸಲ್ಲಿಸಿದರು.

Key words: Congress-wins -11 – polls-Former CM-Siddaramaiah