ಹೊಸ ವರ್ಷಾಚರಣೆಗೆ ಗೈಡ್ ಲೈನ್ಸ್ ಹೊರಡಿಸಿದ ಸರ್ಕಾರ: ಶಾಲಾ-ಕಾಲೇಜು, ಥಿಯೇಟರ್ ಗಳಲ್ಲಿ ಮಾಸ್ಕ್ ಕಡ್ಡಾಯ

ಬೆಂಗಳೂರು,ಡಿಸೆಂಬರ್,26,2022(www.justkannada.in):  ರಾಜ್ಯದಲ್ಲಿ ಕೋವಿಡ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಹೊಸ ಗೈಡ್ ಲೈನ್ ಬಿಡುಗಡೆ ಮಾಡಿದೆ.

ಇಂದು ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಚರಣೆಗೆ ಅವಕಾಶ ನೀಡಲಾಗಿದೆ. 1ಗಂಟೆ ನಂತರ ಹೊಸವರ್ಷಾಚರಣೆಗೆ ಅವಕಾಶವಿಲ್ಲ. ವರ್ಷಾಚರಣೆ ವೇಳೆ ಮಾಸ್ಕ್ ಧಾರಣೆ ಕಡ್ಡಾಯವಾಇದೆ.  ಆದರೆ ದಂಡ ಪ್ರಯೋಗವಿಲ್ಲ ರೆಸ್ಟೋರೆಂಟ್ , ರೆಸಾರ್ಟ್ ಬಾರ್ ಗಳಿಗೂ ಈ ನಿಯಮ ಅನ್ವಯವಾಗಲಿದೆ. ಹೋಟೆಲ್ ಮಾಲೀಕರು ಸಿಬ್ಬಂದಿ ಸಪ್ಲೈಯರ್ ಗಳು ಎರಡು ಡೋಸ್ ಲಸಿಕೆ ಪಡೆದಿರಬೇಕು ಎಂದು ತಿಳಿಸಿದರು.

ಇನ್ನು ಸಿನಿಮಾ ಥಿಯೇಟರ್ ಗಳಲ್ಲಿ ಮಾಸ್ಕ್ ಹಾಕುವುದು ಕಡ್ಡಾಯ. ಶಾಲಾ ಕಾಲೇಜುಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಒಳಾಂಗಣ ಪ್ರದೇಶ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಯಾಗಿದೆ. ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಕ್ಕಳು ಗರ್ಭಿಣಿಯರು ಪಾಲ್ಗೊಳ್ಳುವಂತಿಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

Key words: New Year- guidelines -Masks -mandatory –minister-Ashok