ಕ್ರಿಕೆಟ್: ನಾಳೆಯಿಂದ ಟೀಂ ಇಂಡಿಯಾ ಆಟಗಾರರಿಗೆ ಹೊಸ ಜೆರ್ಸಿ

ಬೆಂಗಳೂರು, ಸೆಪ್ಟೆಂಬರ್ 14, 2019 (www.justkannada.in): ನಾಳೆ ಧರ್ಮಶಾಲದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯದ ಮೂಲಕ ಭಾರತದ ಆಟಗಾರರು ಹೊಸ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ಸದ್ಯ ಭಾರತದ ಜೆರ್ಸಿಯಲ್ಲಿ ಚೀನಾ ಮೂಲದ ಮೊಬೈಲ್ ತಯಾರಕ ಸಂಸ್ಥೆ ಒಪ್ಪೋ ಬ್ರ್ಯಾಂಡ್​ ಇದೆ. ಇದನ್ನು ಕೇರಳ ಮೂಲದ ಬೈಜು ರವೀಂದ್ರನ್ ಒಡೆತನದ ಬೈಜೂಸ್ ಬದಲಾಯಿಸಲಿದೆ.

2017 ಮಾರ್ಚ್ ತಿಂಗಳಲ್ಲಿ 5 ವರ್ಷಗಳ ಅವಧಿಗೆ ಬರೋಬ್ಬರಿ 1079 ಕೋಟಿ ರುಪಾಯಿಗಳಿಗೆ ಒಪ್ಪೋ ಬಿಡ್ ಗೆದ್ದಿತ್ತು. ಆದರೆ, ಒಪ್ಪೋ ತನ್ನ ಬಿಡ್ ಹಕ್ಕನ್ನು ಬೆಂಗಳೂರು ತಳಹದಿಯ ಶೈಕ್ಷಣಿಕ ತಂತ್ರಜ್ಞಾನ ಒನ್ಲೈನ್ ಟೂರಿಂಗ್ ಸಂಸ್ಥೆಯಾದ ಬೈಜೂಸ್‌ಗೆ ಹಸ್ತಾಂತರಿಸಿದೆ.