ನನಗೆ ಡಿಸೇಲ್ ಹಾಕಿಸಲಾರದಷ್ಟು ದುರ್ಗತಿ ಬಂದಿಲ್ಲ- ಡಿಸಿಎಂ ಲಕ್ಷ್ಮಣ್ ಸವದಿ…

ಬೆಳಗಾವಿ,ಜನವರಿ,9,2021(www.justkannada.in):  ತಮ್ಮ ಖಾಸಗಿ ಕಾರಿಗೆ ಡಿಪೋದಲ್ಲಿ ಡಿಸೇಲ್‌ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದ್ದಾರೆ.jk-logo-justkannada-mysore

ಈ ಕುರಿತು ಮಾತನಾಡಿರುವ ಲಕ್ಷ್ಮಣ್ ಸವದಿ, ಡಿಸೇಲ್‌ ಹಾಕಿಸದಷ್ಟು ದುರ್ಗತಿ ನನಗೆ ಬಂದಿಲ್ಲ. 3 ಸಾವಿರಕ್ಕೆ ಜಿಪುಣತನ ಮಾಡುವ ವ್ಯಕ್ತಿ ನಾನಲ್ಲ  ಎಂದು ಹೇಳಿದ್ದಾರೆ.  ನಾನು ಸಾರಿಗೆಯ ಪುರುಷರ ಮತ್ತು ಮಹಿಳೆಯ ವಿಶ್ರಾಂತಿ ಗೃಹಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ನಾನು ಕಾರ್ಯಕ್ರಮದಲ್ಲಿದ್ದ ವೇಳೆ ಈ ಘಟನೆ ನಡೆದಿದೆ. ನನ್ನ ಕಾರು ಚಾಲಕ ಡಿಪೋದ ಒಳಗೆ ಹೋಗಿ ನಮ್ಮ ಕಾರಿಗೆ ಡಿಸೇಲ್‌ ಹಾಕಿಸ್ಬೇಕು. ಬಂಕ್‌ ಎಲ್ಲಿದೆ ಎಂದು ಕೇಳಿದ್ದಾನೆ. ಆಗ, ಬಂಕ್ ಮ್ಯಾನೇಜರ್‌ ಇಲ್ಲೇ ಹಾಕಿಸಿಕೊಳ್ಳುವಂತೆ ಹೇಳಿದ್ದಾನೆ. ಆಗ ಡ್ರೈವರ್‌ ತನಗೆ ಅರಿವಿಲ್ಲದೇ ಡಿಸೇಲ್‌ ಹಾಕಿಸಿಕೊಂಡಿದ್ದಾನೆ  ಸ್ಪಷ್ಟನೆ ನೀಡಿದ್ದಾರೆ.never-diesel-private-car-dcm-laxman-savadi

ನನಗೆ ತಿಳಿಯದೇ ಈ ಘಟನೆ ನಡೆದಿದೆ. 3 ಸಾವಿರಕ್ಕೆ ಜಿಪುಣತನ ಮಾಡುವ ದುರ್ಗತಿ ನನಗೆ ಬಂದಿಲ್ಲ. ಯಾರೋ ಆಗದವರು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ನನಗೆ ಡಿಸೇಲ್ ಹಾಕಿಸಲಾರದಷ್ಟು ದುರ್ಗತಿ ಬಂದಿಲ್ಲ ಎಂದರು.

Key words: never – Diesel -private car- DCM -Laxman Savadi.