ಕೊಡಗು ನೆರೆ ಸಂತ್ರಸ್ಥರಿಗೆ ಬೇಕಾಗಿವೆ ಅಗತ್ಯ ವಸ್ತುಗಳು; ಕೊಡಗು ಡಿಸಿಯಿಂದ ಮೈಸೂರು ಜಿಲ್ಲಾಡಳಿತಕ್ಕೆ ಮನವಿ: ಬನ್ನಿ ನೀವೂ ನೆರವಾಗಿ…

ಮೈಸೂರು, ಆಗಸ್ಟ್ 08, 2019 (www.justkannada.in): ಮೈಸೂರು ಜಿಲ್ಲಾಡಳಿತಕ್ಕೆ ಕೊಡುಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ಕೊಡಗು ಜಿಲ್ಲೆ ಕೆಲವು ಅಗತ್ಯ ಸಾಮಗ್ರಿಗಳ ಅವಶ್ಯಕತೆ ಇದೆ. ಈಗಾಗಲೇ ಆಹಾರ ಹಾಗೂ ಔಷಧ ಬಂದಿವೆ. ಮತ್ತಷ್ಟು ವಸ್ತುಗಳ ಅಗತ್ಯವಿದೆ. ಅವುಗಳನ್ನು ಕಳುಹಿಸಿಕೊಡುವಂತೆ ಕೋರಿದ್ದಾರೆ.

24 ಪಾದಾರ್ಥಗಳು ಅವಶ್ಯಕ ಇದೆ. ಬಟ್ಟೆ, ಪೆಸ್ಟ್ ಮತ್ತಿತರೆ ವಸ್ತುಗಳು ಬೇಕಾಗಿದೆ‌‌. ದಾನಿಗಳು ನಗರ ಪುರಭವನದ ಕೇಂದ್ರಕ್ಕೆ ತಲುಪಿಸಬಹುದು ಎಂದು ಅಪಾರ ಜಿಲ್ಲಾಧಿಕಾರಿ ಪೂರ್ಣಿಮಾ ಹೇಳಿದ್ದಾರೆ.