ಹಾಟ್ ಸ್ಟಾರ್’ನಲ್ಲಿ ದಾಖಲೆ ಗಳಿಕೆ ಕಂಡ ನಯನತಾರಾ ‘ಮೂಕ್ಕುತಿ ಅಮ್ಮನ್’

ಬೆಂಗಳೂರು, ಡಿಸೆಂಬರ್,18,2020(www.justkannada.in): ನಯನತಾರಾ ಅಭಿನಯದ ಮೂಕ್ಕುತಿ ಅಮ್ಮನ್ ಚಿತ್ರ ಭರ್ಜರಿ ಯಶಸ್ಸು ಕಂಡಿದೆ.

ಇತ್ತೀಚೆಗೆ ಹಾಟ್ ಸ್ಟಾರ್’ನಲ್ಲಿ ಬಿಡುಗಡೆಯಾಗಿ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದುವರೆಗೆ ಈ ಚಿತ್ರ 27ಕೋಟಿ ರೂ. ಸಂಗ್ರಹಿಸಿದೆ ಎನ್ನಲಾಗಿದೆ.

ಚಿತ್ರದ ಬಜೆಟ್ 13ಕೋಟಿ ರೂ.ಎನ್ನಲಾಗಿದ್ದು, ಆ ಸಂಗ್ರಹದ ಮೂಲಕ ಈ ಚಿತ್ರ ಒಟಿಟಿ ಸೈಟ್ ನಲ್ಲಿ ದೊಡ್ಡ ದಾಖಲೆ ಸೃಷ್ಟಿಸಿದೆ ಎನ್ನಲಾಗಿದೆ.

ಆರ್.ಜೆ.ಬಾಲಾಜಿ ಮತ್ತು ಎನ್.ಜೆ.ಸರಕುಣನ್ ಮೂಕ್ಕುತಿ ಅಮ್ಮನ್ ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳಿದ್ದರು.