ಸೆ. 22 ರಿಂದ ನವರಾತ್ರಿ ರಂಗೊತ್ಸವ: ನಾಟಕಗಳು, ವಿವಿಧ ಜಾನಪದ ಕಲಾ ಪ್ರಕಾರ ಪ್ರದರ್ಶನ

ಮೈಸೂರು, ಸೆಪ್ಟಂಬರ್,19,2025 (www.justkannada.in): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ರಂಗಾಯಣದ ವತಿಯಿಂದ ನವರಾತ್ರಿ ರಂಗೋತ್ಸವನ್ನು ಹಮ್ಮಿಕೊಳ್ಳಲಾಗಿದ್ದು, ಇದೇ   ಸೆಪ್ಟೆಂಬರ್ 22 ರಿಂದ 10 ದಿನಗಳ ಕಾಲ ನಾಟಕಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅವರು ತಿಳಿಸಿದರು.

ರಂಗಾಯಣದ ಆವರಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರಂಗೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಸತೀಶ್ ತಿಪಟೂರು,  ಸೆಪ್ಟೆಂಬರ್ 22 ರಂದು ಸಂಜೆ 5.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವಶಿವರಾಜ ಎಸ್ ತಂಗಡಗಿ ಅವರು ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಿದ್ದಾರೆ‌ ಎಂದರು.

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 1 ರವರೆಗೆ ರಂಗಾಯಣದ ವನರಂಗದಲ್ಲಿ ಪ್ರತಿ ದಿನ ಸಂಜೆ 5.30ಕ್ಕೆ ಅಂತರರಾಜ್ಯ  ಕಲಾತಂಡಗಳಿಂದ ಜಾನಪದ ನೃತ್ಯ ಪ್ರದರ್ಶನವಿದ್ದು, ಪ್ರತಿದಿನ ಸಂಜೆ  7 ಗಂಟೆಗೆ ಭೂಮಿಗೀತದಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ರಂಗಾಯಣ ಉಪ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್,  ಸಂಚಾಲಕರಾದ ನಂದಿನಿ ಕೆ.ಆರ್ ಹಾಗೂ  ಬಿ.ಎನ್ ಶಶಿಕಲಾ ಬಿ.ಎನ್ ಹಾಜರಿದ್ದರು.

ನಾಟಕ ಪ್ರದರ್ಶನ ವಿವರ:

ಸೆಪ್ಟೆಂಬರ್ 22  ರಂದು ಶರೀಫ

ರಚನೆ: ಮಂಜುನಾಥ ಬಿಳಕೆರೆ

ನಿರ್ದೇಶನ : ಶಕುಂತಲಾ ಹೆಗಡೆ

ಸೆಪ್ಟೆಂಬರ್.23 ರಂದು ನೇಮಿ ಚಂದ್ರ ರವರ ಕಾದಂಬರಿ ಆಧಾರಿತ ನೋವಿಗದ್ದಿದ ಕುಂಚ

ರಂಗರೂಪ, ನಿರ್ದೇಶನ: ವಿನೋದ್ ರಂಗ, ಕವಾ, ಮೈಸೂರು.

ಸೆಪ್ಟೆಂಬರ್ 24 ರಂದು ರಾಕ್ಷಸ

ರಚನೆ: ಹೂಲಿ ಶೇಖರ್

ನಿರ್ದೇಶನ: ಅಂಕರಾಜು ಎನ್, ಕೊಳ್ಳೇಗಾಲ

ಸೆಪ್ಟೆಂಬರ್ 25 ರಂದು ಚಿತ್ರಪಟ ರಾಮಾಯಣ

ರಚನೆ: ಡಾ.ಎಚ್ ಎಸ್.ವೆಂಕಟೇಶ್ ಮೂರ್ತಿ

ನಿರ್ದೇಶನ: ಸುಭಾಷ್  ಎ.ಎಸ್

ಸೆಪ್ಟೆಂಬರ್ 26ರಂದು ಬೀಚಿ ಬರಹಗಳನ್ನಾಧರಿಸಿದ  ಶ್ರೀ ತಿಮ್ಮಾರ್ಪಣಮಸ್ತು

ನಿರ್ದೇಶನ: ರಮೇಶ್ ಕೆ. ಬೆಣಕಲ್, ಮೈಸೂರು

ಸೆಪ್ಟೆಂಬರ್ 27 ರಂದು ಕಲ್ಯಾಣದ ಬಾಗಿಲು

ರಚನೆ: ಡಾ.ಎಸ್. ನಟರಾಜು ಬೂದಾಳ್

ನಿರ್ದೇಶನ: ಮಧು ಮಳವಳ್ಳಿ

ಸೆಪ್ಟೆಂಬರ್ 28 ರಂದು ಚೂರಿಕಟ್ಟೆ ಅಥಾರ್ತ್ ಕಲ್ಯಾಣಪುರ

ರಚನೆ: ಕೆ.ವಿ.ಅಕ್ಷರ

ನಿರ್ದೇಶನ: ಪ್ರವೀಣ್ ಬೆಳ್ಳಿ, ಮೈಸೂರು

ಸೆಪ್ಟೆಂಬರ್ 29 ರಂದು ಮಾದಾರಿ ಮಾದಯ್ಯ

ರಚನೆ: ಡಾ.ಹೆಚ್. ಎಸ್. ಶಿವಪ್ರಕಾಶ

ನಿರ್ದೇಶನ: ಹುಣಸೂರ್ ಅರ್ಜುನ್

ಸೆಪ್ಟೆಂಬರ್ 30 ರಂದು ಜಾತ್ರೆ

ರಚನೆ: ದ.ರಾ.ಬೇಂದ್ರೆ

ನಿರ್ದೇಶನ: ಕೃಷ್ಣಮೂರ್ತಿ, ಮೈಸೂರು

ಅಕ್ಟೋಬರ್ 1 ರಂದು ಜನ ಗಣ ಮನ

ರಚನೆ: ದೇವಕಿ ಧರ್ಮಿಷ್ಟೆ, ಸುಗುಣ ಎಂ.ಎಂ.

ನಿರ್ದೇಶನ: ಸುಗುಣ ಎಂ.ಎಂ.

ಜಾನಪದ ನೃತ್ಯ ಪ್ರದರ್ಶನ ವಿವರ:

ಲಂಬಾಡಿ/ಮಾತುರಿ ನೃತ್ಯ – ತೆಲಂಗಾಣ

ಲಾವಣಿ, ಹೋಲಿ ನೃತ್ಯ- ಮಹಾರಾಷ್ಟ್ರ

ಸಿದ್ದಿ ಢುಮಾಲ್ ನೃತ್ಯ- ಗುಜರಾತ್

ಸಂಬಲ್ ಪುರಿ ನೃತ್ಯ- ಒರಿಸ್ಸಾ

ತಿರುವತ್ತುರಕಳಿ ಮತ್ತು ಒಪ್ಪಾನ ನೃತ್ಯ- ಕೇರಳ

ಬಿಹು, ಗುಸಾನ್ ನೃತ್ಯ- ಅಸ್ಸಾಂ

ನೋರ್ತಾ ಮತ್ತು ಸೈತಾನ್ ನೃತ್ಯ- ಮಧ್ಯಪ್ರದೇಶ್

ರಥ್ವಾ ನೃತ್ಯ-  ಗುಜರಾಜ್

ತಪ್ಪಾಟ್ಟಗುಳು ನೃತ್ಯ- ಆಂಧ್ರಪ್ರದೇಶ

ಕರಗಂ, ಕಾವಾಡಿ, ತಪ್ಪಟ್ಟಮ್ ನೃತ್ಯ- ತಮಿಳುನಾಡು

Key words: Mysore dasara, Navratri Rangotsava, Sept. 22