ಬಾಲಿಯಲ್ಲಿ ರಿಷಿ ಸುನಾಕ್ ಭೇಟಿ ಮಾಡಿದ ನರೇಂದ್ರ ಮೋದಿ

ಬೆಂಗಳೂರು. ನವೆಂಬರ್ 15, 2022 (www.justkannada.in): ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ರಿಷಿ ಸುನಾಕ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

ಇಂಡೋನೇಷಿಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ 20 ನಾಯಕರ ಶೃಂಗಸಭೆಯಲ್ಲಿಪಾಲ್ಗೊಂಡಿರುವ ಈ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿದ್ದಾರೆ.

ಇನ್ಫೋಸಿಸ್ ನಾರಾಯಣ ಮೂರ್ತಿ ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗಿರುವ ರಿಷಿ ಸುನಾಕ್, ಭಾರತೀಯ ಮೂಲದವರಾಗಿದ್ದಾರೆ.

ಅವರ ಆಯ್ಕೆಯನ್ನು ಭಾರತೀಯರು ಸಂಭ್ರಮಿಸಿದ್ದರು. ಇದೀಗ ರಿಷಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.