ನಂಜನಗೂಡು ಟಿಹೆಚ್ ಓ ಆತ್ಮಹತ್ಯೆ ಪ್ರಕರಣ: ಮೈಸೂರು ಜಿಪಂ ಸಿಇಓ ವಿರುದ್ದ ಎಫ್‌ ಐಆರ್ ದಾಖಲು…

ಮೈಸೂರು,ಆ,22,2020(www.justkannada.in): ನಂಜನಗೂಡು ಟಿಹೆಚ್‌ ಓ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ವಿರುದ್ದ ಎಫ್‌ ಐಆರ್ ದಾಖಲಾಗಿದೆ.nanjangud-tho-suicide-case-firs-filed-against-mysore-zp-ceo

ಪ್ರಕರಣ ಸಂಬಂಧ ಮೃತ ಆರೋಗ್ಯಾಧಿಕಾರಿ ನಾಗೇಂದ್ರ ಅವರ ತಂದೆ ಟಿ.ಎಸ್.ರಾಮಕೃಷ್ಣ ಅವರು ಆಲನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಮಾಡಿ ದೂರು ನೀಡಲಾಗಿತ್ತು. ಇದೀಗ ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ  ವಿರುದ್ದ ಐಪಿಸಿ 1860(u/s 306) ಅನ್ವಯ ಎಫ್ ಐ ಆರ್ ದಾಖಲಾಗಿದೆ.nanjangud-tho-suicide-case-firs-filed-against-mysore-zp-ceo

ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕಳೆದ ಎರಡು ದಿನಗಳ ಹಿಂದೆ ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದಲ್ಲಿ ಮೈಸೂರು ಜಿಪಂ ಸಿಇಒ  ವಿರುದ್ದ ಒತ್ತಡ ಹಾಕಿದ ಆರೋಪ ಕೇಳಿ ಬಂದಿತ್ತು. ಇದೀಗ ಎಫ್ ಐಆರ್ ದಾಖಲಾಗಿದ್ದು, ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾಗೆ ಕಂಟಕ ಎದುರಾಗಿದೆ.nanjangud-tho-suicide-case-firs-filed-against-mysore-zp-ceo

Key words: Nanjangud –THO- suicide case-FIRs -filed –against- Mysore-ZP- CEO