Thursday, July 30, 2026

BDA Apartments

Home Crime ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಮಂದಿ ದರೋಡೆಕೋರರು ಅಂದರ್: ಚಿನ್ನಾಭರಣ, ಬೆಳ್ಳಿ, ಕಾರುಗಳು ವಶ….

ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಮಂದಿ ದರೋಡೆಕೋರರು ಅಂದರ್: ಚಿನ್ನಾಭರಣ, ಬೆಳ್ಳಿ, ಕಾರುಗಳು ವಶ….

ಮೈಸೂರು,ಸೆ,27,2019(www.justkannada.in):  ಕಳವು ಮತ್ತು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಮೈಸೂರಿನ ನಂಜನಗೂಡು ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉಮೇಶ್, ಗಗನ್, ಸುರೇಶ್, ತಸ್ಲೀಂ ಪಾಷ,  ಮಹಮ್ಮದ್ ಮುಸ್ತಾಖ್, ಮಹಮ್ಮದ್ ಮುಬಾರಕ್, ಮಹೇಶ, ಸಿದ್ದರಾಜು, ಪ್ರಸಾದ್, ಮೊಹಮದ್ ಮುನ್ನ ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು ಮೌಲ್ಯ 82 ಲಕ್ಷ ಬೆಲೆ ಬಾಳುವ ಚಿನ್ನಾಭರಣ, 3.1/2  ಕೆ.ಜಿ ಬೆಳ್ಳಿ, ನಾಲ್ಕು ಕಾರು ಹಾಗೂ  ಒಂದು  ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಂಜನಗೂಡು ಉಪವಿಭಾಗದ ವಿಶೇಷ ಪೋಲಿಸ್ ತಂಡ ಕಾರ್ಯಾಚರಣೆ ನಡೆಸಿ ಮೈಸೂರು, ನಂಜನಗೂಡು, ಜಯಪುರ, ಹುಲ್ಲಹಳ್ಳಿ, ತಲಕಾಡು, ಕೆ.ಆರ್.ನಗರ, ಹುಣಸೂರು, ಮಂಡ್ಯ ಮತ್ತು ಹಾಸನಗಳಲ್ಲಿ 35 ಪ್ರಕರಣಗಳನ್ನ ಪತ್ತೆ ಹಚ್ಚಿದ್ದಾರೆ.

ಮೂರು ತಂಡಗಳಾಗಿ ಈ ಪ್ರಕರಣಗಳನ್ನ ಭೇದಿಸಿದ್ದಾರೆ. ಬಂಧಿತ ಕಳ್ಳರು ಸುಮಾರು 22 ರಿಂದ 30 ವಯಸ್ಸಿನವರು ಎನ್ನಲಾಗಿದೆ.

Key words: nanjanagudu-police operation-10 thiefs-arrest