ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 2 ರಿಂದ 3 ರೂ ಹೆಚ್ಚಳ ಸಾಧ್ಯತೆ…

ಬೆಂಗಳೂರು,ಜ,16,2020(www.justkannada.in): ನಂದಿನಿ ಹಾಲು ಬಳಸುವ ಗ್ರಾಹಕರಿಗೆ ಇದೀಗ ಶಾಕ್ ಕಾದಿದೆ. ಹೌದು ಪ್ರತಿಲೀಟರ್ ನಂದಿನಿ ಹಾಲಿನ ದರವನ್ನ ಎರಡರಿಂದ ಮೂರು ರೂಪಾಯಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ನಂದಿನಿ ಹಾಲಿನ ದರವನ್ನ 2ರೂ ನಿಂದ  3.ರೂ ಹೆಚ್ಚಳ ಮಾಡುವ ಬಗ್ಗೆ ನಾಳೆ ನಡೆಯುವ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ರಾಜ್ಯದ 14 ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರವನ್ನು ಹೆಚ್ಚಳ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸಿವೆ. ಪ್ರತಿ ಲೀಟರ್ ಗೆ ರೂ.2ರಿಂದ 3 ರೂಪಾಯಿ ಹೆಚ್ಚಳದ ಬೇಡಿಕೆಯನ್ನು ಇಟ್ಟಿವೆ. ಈಬಗ್ಗೆ ನಾಳಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ನಂದಿನಿ ಹಾಲಿನ ದರ ಎರಡರಿಂದ ಮೂರು ರೂ ಹೆಚ್ಚಳವಾಗುವ ಸಾಧ್ಯತೆ ಇದೆ.

Key words: nandini milk- per liter- increase-KMF president-balachandra jarakiholi