ರಾಜ್ಯದ ಜನರಿಗೆ ಶಾಕ್: ನಂದಿನಿ ತುಪ್ಪದ ಬೆಲೆ 90 ರೂ. ಏರಿಕೆ

ಬೆಂಗಳೂರು, ನವೆಂಬರ್,5,2025 (www.justkannada.in):  ರಾಜ್ಯದ ಜನತೆಗೆ ಕೆಎಂಎಫ್​  ನಂದಿನಿ ತುಪ್ಪದ ಬೆಲೆ ಏರಿಕೆಯ ಶಾಕ್ ನೀಡಿದೆ.

ಹೌದು, ಪ್ರತಿ ಲೀಟರ್​ ನಂದಿನಿ ತುಪ್ಪದ ದರವನ್ನು 90 ರೂಪಾಯಿ ಏರಿಕೆ ಮಾಡಿದೆ. ಇತ್ತೀಚಿಗಷ್ಟೇ ಜಿಎಸ್​ಟಿ ದರ ಇಳಿಕೆಯಾದ ನಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದ ಕೆಎಂಎಫ್ ದರವನ್ನು 40 ರೂ. ಇಳಿಕೆ ಮಾಡಿತ್ತು. ಆದರೆ, ಇದೀಗ ತುಪ್ಪಕ್ಕೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ದಿಢೀರ್ ಆಗಿ ದರ ಏರಿಕೆ ಮಾಡಿದೆ.

ಈ ಮೊದಲು  ಒಂದು ಲೀಟರ್​ ತುಪ್ಪ 610 ರೂ ಇತ್ತು. ಈಗ 700 ರೂಪಾಯಿ ದರ ನಿಗದಿ ಮಾಡಲಾಗಿದೆ. ಜಿಎಸ್​ಟಿ ಸುಧಾರಣೆ ಬಳಿಕ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಹಿನ್ನೆಲೆ ದಿಢೀರ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಕೆಎಂಎಫ್ ತಿಳಿಸಿದೆ. ನಂದಿನಿ ತುಪ್ಪದ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.

Key words: KMF, Nandini ghee, price, hiked