ನಮ್ಮ ಮೆಟ್ರೋ ಕ್ಯೂಆರ್ ಕೋಡ್, ವಾಟ್ಸಪ್​ ಪೇಮೆಂಟ್​​​ ಸೌಲಭ್ಯಕ್ಕೆ ಸಿಕ್ತು ಭರ್ಜರಿ ರೆಸ್ಪಾನ್ಸ್..

ಬೆಂಗಳೂರು, ಜನವರಿ,23,2024(www.justkannada.in): ನಮ್ಮ ಮೆಟ್ರೋ ಪ್ರಯಾಣಿಕರ‌ ಅನುಕೂಲಕ್ಕಾಗಿ ಬಿಎಂಆರ್​ಸಿಎಲ್  ಜಾರಿ ಮಾಡಿರುವ ಕ್ಯೂಆರ್ ಕೋಡ್, ವಾಟ್ಸಪ್​ ಪೇಮೆಂಟ್​​​ ಸೌಲಭ್ಯಕ್ಕೆ ಪ್ರಯಾಣಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಹೌದು, ಬಿಎಂಆರ್​​ಸಿಎಲ್ ವತಿಯಿಂದ ನಮ್ಮ ಮೆಟ್ರೋ ಪ್ರಯಾಣ​​ಕ್ಕೆ ಡಿಜಿಟಲ್​ ಪಾವತಿ ವ್ಯವಸ್ಥೆ ಜಾರಿಗೊಳಿಸಿದ್ದು, ಪ್ರಯಾಣಿಕರು ಅದರ ಗರಿಷ್ಠ ಪ್ರಯೋಜನ ಪಡೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಬಳಲುವ ಪ್ರಯಾಣಿಕರು ಮೆಟ್ರೋ ಮೊರೆ ಹೋಗುತ್ತಾರೆ.  ಸದ್ಯ ಮೆಟ್ರೋದಲ್ಲಿ ಒಂದು ದಿನಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ.

ನವೆಂಬರ್ 2022ರಲ್ಲಿ ಬಿಎಂಆರ್​ಸಿಎಲ್ ಡಿಜಿಟಲ್ ಪಾವತಿ ವ್ಯವಸ್ಥೆ  ಕ್ಯೂಆರ್ ಕೋಡ್ ಟಿಕೆಟ್ ಆರಂಭ ಮಾಡಿತು.‌  ಆರಂಭದಲ್ಲಿ 2.13 ಲಕ್ಷ ಜನ ಕ್ಯೂಆರ್ ಟಿಕೆಟ್ ಬಳಸುತ್ತಿದ್ದರು.‌ ಬಳಿಕ ಆ ಸಂಖ್ಯೆ ನಿಧಾನಕ್ಕೆ ಏರಿಕೆಯಾಗಿದ್ದು,  2023ರ ಜನವರಿ ತಿಂಗಳ  ವೇಳೆಗೆ ಬಳಕೆದಾರ ಸಂಖ್ಯೆ 5 ಲಕ್ಷ ಗಡಿ ಮುಟ್ಟಿತು.‌ ಜೂನ್ 2023ರಲ್ಲಿ ಡಿಜಿಟಲ್ ಪಾವತಿ ಬಳಸುವ ಪ್ರಯಾಣಿಕರ ಸಂಖ್ಯೆ 10 ಲಕ್ಷ ಕ್ಕೆ ಮುಟ್ಟಿತು. ಬಳಿಕ ಡಿಸೆಂಬರ್ ತಿಂಗಳಿನಲ್ಲಿ 25.9 ಲಕ್ಷಕ್ಕೆ ಏರಿಕೆಯಾಗಿ ಎಲ್ಲಾ ದಾಖಲೆ ಬ್ರೇಕ್ ಆಗಿದೆ. ತಿಂಗಳ ಬಳಕೆದಾರರ ಸಂಖ್ಯೆ ಮೊದಲ ಬಾರಿಗೆ 25 ಲಕ್ಷವನ್ನು ತಲುಪಿದೆ. ಇದರಿಂದ ಟಿಕೆಟ್ ಕೌಂಟರ್ ಸಿಬ್ಬಂದಿ ಒತ್ತಡ ಕಮ್ಮಿಯಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

BMRCLನ QR ಕೋಡ್ ಟಿಕೆಟ್ ಅನ್ನು ಪ್ರಯಾಣಿಕರು WhatsApp, Namma Metro ಮೊಬೈಲ್ ಅಪ್ಲಿಕೇಶನ್ ಹಾಗೂ Paytm ಮತ್ತು Amazon ಮೂಲಕ ಪಡೆಯಬಹುದು. ಜೊತೆಗೆ ಗ್ರೂಪ್ ಕ್ಯೂ ಆರ್ ಟಿಕೆಟ್ ಪಡೆಯಲು ಅವಕಾಶವಿದೆ. ದಿನ ಮೆಟ್ರೋದಲ್ಲಿ 6 ರಿಂದ 6.5 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಫೈಕಿ 80 ಸಾವಿರದಿಂದ 1 ಲಕ್ಷ ಜನ ಕ್ಯೂಆರ್ ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದು, ಟಿಕೆಟ್ ಕೌಂಟರ್ ನ ಒತ್ತಡ ಕಡಿಮೆ ಆಗಲು ಕಾರಣವಾಗಿದೆ.‌ ಬಿಎಂಆರ್ ಸಿಎಲ್ ಕ್ಯೂಆರ್ ಅನ್ನೂ ಕಳೆದ ತಿಂಗಳವರೆಗೂ ಬರೊಬ್ಬರಿ 1.39 ಕೋಟಿ ಜನ ಬಳಸಿದ್ದಾರೆ. ಈ ಸಂಖ್ಯೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಳವಾಗುವ ನಿರೀಕ್ಷೆಯಿದೆ.

Key words: Namma Metro -QR Code-WhatsApp-payment-facility-overwhelming-response.