ಮೈಸೂರು,ಜೂನ್,23,2025 (www.justkannada.in): ಮೈಸೂರಿನ ತುಳಸಿದಾಸಪ್ಪ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಮೈಸೂರಿನ ಕೃಷ್ಣಮೂರ್ತಿಪುರಂನ ಜೆ ಎಲ್ ಬಿ ರಸ್ತೆಯಲ್ಲಿರುವ ತುಳಸಿದಾಸಪ್ಪ ಆಸ್ಪತ್ರೆಯ ವಿವಿಧೆಡೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ನಾಗಲಕ್ಷ್ಮಿ ಚೌಧರಿ ಅವರು ಆಸ್ಪತ್ರೆಗೆ ಬಂದಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಹೇಳಿಕೊಂಡರು. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮಹಿಳೆಯರು ದೂರಿದರು.
ಆಸ್ಪತ್ರೆಯಲ್ಲಿ ಇರುವ ಕುಂದುಕೊರತೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜ್ಯದಲ್ಲಿ ಇನ್ನೂ ನಿಲ್ಲದ ಬಾಲ್ಯ ವಿವಾಹ ಪದ್ದತಿ- ನಾಗಲಕ್ಷ್ಮಿ ಚೌಧರಿ ಕಳವಳ
ರಾಜ್ಯದಲ್ಲಿ ಒಂದೇ ವರ್ಷದ ಅವಧಿಯಲ್ಲಿ ಸುಮಾರು 29 ಸಾವಿರ ಬಾಲ್ಯ ವಿವಾಹವಾಗಿದ್ದು, ಈ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಕಳವಳ ವ್ಯಕ್ತಪಡಿಸಿದರು.
ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣ ಬಡತನ ಮತ್ತು ಅರಿವಿನ ಕೊರತೆ. ರಾಜ್ಯದ ಈ ವರ್ಷ ಸುಮಾರು 29 ಸಾವಿರ ಬಾಲ್ಯ ವಿವಾಹಗಳ ಆಗಿವೆ. ಪೋಷಕರು ತಮ್ಮ ಮಕ್ಕಳ ಮೇಲಿನ ಜವಾಬ್ದಾರಿ ಕಳೆದುಕೊಳ್ಳುವ ಕಾತುರ ಮತ್ತು ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳು ಪ್ರಿತಿ,ಪ್ರೇಮದ ಬಲೆಗೆ ಬೀಳುವುದು ಕಾರಣವಾಗಿದೆ. ನನ್ನ ಜನ ಎಲ್ಲಿವರೆಗೆ ಅರಿವು ಪಡೆಯುವುದಿಲ್ಲವೋ ಅಲ್ಲಿವರೆಗೂ ಇಂತ ಸಾಮಾಜಿಕ ಅನಿಷ್ಟ ಪದ್ದತಿಗಳು ಮುಂದುವಯುತ್ತಲೇ ಇರಿತ್ತವೆ ಎಂದು ನಾಗಲಕ್ಷ್ಮಿ ಚೌಧರಿ ಹೇಳಿದರು.
Key words: State, Women’s Commission, Chairperson, Nagalakshmi Chaudhary, Mysore