ಮೈಸೂರು, ಆಗಸ್ಟ್, 3,2026 (www.justkannada.in): ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ತನ್ವೀರ್ ಸೇಠ್ ಅವರ ನಿವಾಸದ ಬಳಿ ಬೆಂಬಲಿಗರು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
“ರಾಜೀನಾಮೆ ಕೊಟ್ಟುಬಿಡಿ ಸರ್”, “ಪಕ್ಷವಿರೋಧಿಗಳಿಗೆ ಸಚಿವ ಸ್ಥಾನ ನೀಡುತ್ತಾರೆ, ನಮಗೇಕೆ ನ್ಯಾಯ ಇಲ್ಲ?”, “ಪೇಮೆಂಟ್ ಗಿರಾಕಿಗಳಿಗೆ ಮಂತ್ರಿಗಿರಿ, ನಿಷ್ಠಾವಂತರಿಗೆ ಅನ್ಯಾಯ” ಎಂದು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
“ನೀವೇನೂ ತಪ್ಪು ಮಾಡಿಲ್ಲ. ನೆನ್ನೆ-ಮೊನ್ನೆ ಬಂದವರಿಗೆ, ಪಕ್ಷಕ್ಕೆ ಮೋಸ ಮಾಡಿದವರಿಗೆ ಸ್ಥಾನ ಕೊಡುತ್ತಾರೆ. ಇಂತಹ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಥವೇ ಇಲ್ಲ” ಎಂದು ಬೆಂಬಲಿಗರು ತನ್ವೀರ್ ಸೇಠ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಹೈಕಮಾಂಡ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, “ಅನ್ಯಾಯದ ವಿರುದ್ಧ ಕಠಿಣ ನಿಲುವು ತಾಳಬೇಕು. ಅಗತ್ಯವಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಹೋರಾಟ ನಡೆಸಿ” ಎಂದು ಒತ್ತಾಯಿಸಿದರು.
ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ತನ್ವೀರ್ ಸೇಠ್ ಅವರ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.
ENGLISH SUMMARY…
Mysuru: Supporters urge Tanveer Sait to resign after Cabinet snub
Following his exclusion from the Karnataka Cabinet, supporters and Youth Congress workers gathered outside MLA Tanveer Sait’s residence in Mysuru, urging him to resign. They alleged that “party loyalists are being ignored while undeserving leaders are rewarded” and expressed anger over the High Command’s decision. The supporters appealed to Sait to take a strong stand against what they called an injustice.
Key words: Mysuru, Tanveer Sait, Supporters, urge, resign






