EXCLUSIVE : ಮೈಸೂರು “ಜಯದೇವ “ ಗೆ ಮಿಡಿದ ಸಿಎಂ ಸಿದ್ದರಾಮಯ್ಯ “ಹೃದಯ”

Chief Minister Siddaramaiah has announced a grant of ₹180 crore to upgrade the Sri Jayadeva Institute of Cardiovascular Sciences and Research in Mysuru. As part of the project, more than 200 additional beds will be added to the hospital. Patients from Mysuru and surrounding districts heavily depend on the hospital. In addition, a large number of patients from Kerala also visit the facility for treatment, increasing the workload on doctors.

 

ಮೈಸೂರು, ಮಾ.೦೬,೨೦೨೬ : ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಉನ್ನತೀಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 180 ಕೋಟಿ ರೂ. ಅನುದಾನ ಘೋಷಿಸಿ, ಈ ಯೋಜನೆಯಡಿ ಆಸ್ಪತ್ರೆಗೆ 200 ಕ್ಕೂ ಹೆಚ್ಚು ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಿರುವುದಕ್ಕೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ಧನ್ಯವಾದ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ ನಲ್ಲಿ ಮೈಸೂರಿನ ಶ್ರೀಜಯದೇವ ಆಸ್ಪತ್ರೆಗೆ ಅನುದಾನ ಪ್ರಕಟಿಸಿದ ಹಿನ್ನೆಲೆಯಲ್ಲಿ  “ಜಸ್ಟ್‌ ಕನ್ನಡ”,  ಸಂಸ್ಥೆ ನಿರ್ದೇಶಕ ಡಾ.ಬಿ.ದಿನೇಶ್‌ ಅವರನ್ನು ಸಂದರ್ಶಿಸಿತು. ಅದರ ವಿವರ ಹೀಗಿದೆ…

ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಮಾತ್ರವಲ್ಲದೆ ಕೇರಳ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿರುವುದರಿಂದ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಪ್ರತಿದಿನ ಸುಮಾರು 800 ರಿಂದ 1000 ಹೊರರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿದರೆ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಮುಂದಿನ 10 ರಿಂದ 15 ವರ್ಷಗಳವರೆಗೆ ಸಮಸ್ಯೆ ಎದುರಾಗುವುದಿಲ್ಲ.

ಮಿಡಿದ ಹೃದಯ:

ಶ್ರೀಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್‌ ಮೈಸೂರಿನವರೇ ಆಗಿರುವುದು ಪರೋಕ್ಷವಾಗಿ ಮೈಸೂರಿಗೆ ಅನುಕೂಲವೇ ಆಗಿದೆ.  ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಪ್ರತಿಯೊಂದು ಸಂದರ್ಭದಲ್ಲಿ ಡಾ.ದಿನೇಶ್‌  ಮನವಿ ಮಾಡುತ್ತಿದ್ದರು.

ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಇಂದಿನ ಬಜೆಟ್‌ ನಲ್ಲಿ  180 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಇದು ಸಂತಸ ತಂದಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ದಿನೇಶ್ ತಿಳಿಸಿ, ಸಿದ್ದರಾಮಯ್ಯ ಅವರ ಮಾತೃ ಹೃದಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಏನು ಪ್ರಯೋಜನ:

ಈ ಯೋಜನೆಯಿಂದ ಹೆಚ್ಚುವರಿ ವೈದ್ಯರ ನೇಮಕ, ಮೂಲಸೌಕರ್ಯ ಅಭಿವೃದ್ಧಿ, ಶಸ್ತ್ರಚಿಕಿತ್ಸೆಗಳ ಹೆಚ್ಚಳ ಮತ್ತು ರೋಗಿಗಳ ಕಾಯುವಿಕೆ ಸಮಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ರೋಗಿಗಳ ಒತ್ತಡದಿಂದ ಶಸ್ತ್ರ ಚಿಕಿತ್ಸೆಗೆ ಅವಶ್ಯಕತೆ ಇರುವವರು ಸರದಿಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಚಿಕಿತ್ಸೆಗೆಂದು ಆಗಮಿಸುವ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ವೈದ್ಯರ ಪ್ರಮಾಣ ಸಾಲದು. ಆದರೆ ಈಗ ರಾಜ್ಯ ಸರಕಾರ ಬಜೆಟ್‌ ನಲ್ಲಿ ಅನುದಾನ ಘೋಷಿಸಿರುವ ಕಾರಣ, ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಬಹುದು. ಜತೆಗೆ ಅಪರೇಷನ್‌ ಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಇದರಿಂದ ರೋಗಿಗಳ ಕಾಯುವಿಕೆಯ ಪ್ರಮಾಣ ಕಡಿಮೆಯಾಗಲಿದೆ ಎಂದರು.

key words: #Mysuru #JayadevaHospital #Siddaramaiah #Healthcare #Karnataka #HospitalUpgrade

Mysuru, Jayadeva Hospital, Siddaramaiah, Healthcare, Karnataka, Hospital Upgrade

SUMMARY:

Mysuru: Chief Minister Siddaramaiah has announced a grant of ₹180 crore to upgrade the Sri Jayadeva Institute of Cardiovascular Sciences and Research in Mysuru. As part of the project, more than 200 additional beds will be added to the hospital.

Patients from Mysuru and surrounding districts heavily depend on the hospital. In addition, a large number of patients from Kerala also visit the facility for treatment, increasing the workload on doctors.

Currently, around 800 to 1,000 outpatients visit the hospital daily for consultation and treatment. Officials said the addition of 200 beds will significantly reduce the pressure on the hospital and help meet patient demand for the next 10–15 years.

Hospital Director Dr. Dinesh said the hospital had been repeatedly submitting requests to the Chief Minister regarding the need for expansion. He expressed happiness over the announcement of the ₹180 crore grant.

The upgrade is expected to enable recruitment of more doctors, improvement of infrastructure, an increase in surgeries, and reduction in patient waiting time, he added.

Editor Pic

#Mysuru #JayadevaHospital #Siddaramaiah #Healthcare #Karnataka #HospitalUpgrade