Friday, September 18, 2026

BDA Apartments

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾ, ಸಿಎಂ ಸಿದ್ದರಾಮಯ್...
Home DASARA2024 ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾ, ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾ, ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ

Writer Prof. Hampana, CM Siddaramaiah invited to inaugurate Mysuru Dasara celebrations

 

ಬೆಂಗಳೂರು, ಸೆ.26,2024: (www.justkannada.in news) ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಆಹ್ವಾನಿಸಲಾಯಿತು.

ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಾಹಿತಿ ಪ್ರೊ.ಹಂಪನಾ VTU TOP BANNER 04

ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್ ರಸ್ತೆಯ  ಅಮೇರಿಕನ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ ಆಹ್ವಾನ ಕೋರಲಾಯಿತು. ಮೈಸೂರು ಪೇಟ ತೋಡಿಸಿ,ಫಲಫುಷ್ಪದೊಂದಿಗೆ ಆಮಂತ್ರಣ ನೀಡಲಾಯಿತು.

ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ನಿವಾಸಲ್ಲಿ ಭೇಟಿಯಾಗಿ ದಸರಾ ಮಹೋತ್ಸವಕ್ಕೆ ಆಹ್ವಾನಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ವಿಧಾನ ಪರಿಷತ್‌ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ರವಿಶಂಕರ್‌, ಅನಿಲ್‌ ಚಿಕ್ಕಮಾದು,ಡಾ . ತಿಮ್ಮಯ್ಯ, ಮಂಜೇಗೌಡ ಇತರರು ಹಾಜರಿದ್ದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ dasara – cm dasara cm

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ‌ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತು ಸ್ವಾಗತ ಸಮಿತಿಯ ಎಲ್ಲ ಅಧಿಕಾರಿಗಳು ಇದ್ದರು.

key words: Writer Prof. Hampana, CM Siddaramaiah,inaugurate, Mysuru Dasara, celebrations.

writer prof hampana TOP-BANNER-01 TOP BANNER 01

summary: 

Writer Prof. Hampana, CM Siddaramaiah invited to inaugurate Mysuru Dasara celebrations