ಮೈಸೂರು ದಸರಾ 2023: ಭದ್ರತೆಗೆ 4200 ಪೊಲೀಸ್ ಅಧಿಕಾರಿ ಸಿಬ್ಬಂದಿ ನಿಯೋಜನೆ

ಮೈಸೂರು, ಅಕ್ಟೋಬರ್ 15, 2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದ್ದು, ಸುರಕ್ಷಿತ ಸುಗಮ ಸಂಪ್ರದಾಯಿಕ ದಸರಾ ಆಚರಣೆಗೆ ಮೈಸೂರು ನಗರ ಪೊಲೀಸ್ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಂದಿನಿಂದ ಅಕ್ಟೊಬರ್ 24ರ ತನಕ ದಸರಾ ಆಚರಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

1ಡಿಐಜಿ,11ಎಸ್ಪಿ, 410ಪೊಲೀಸ್ ಅಧಿಕಾರಿಗಳು, 3778ಪೊಲೀಸ್ ಸಿಬ್ಬಂದಿಗಳು,ಒಟ್ಟು 4200 ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಸಶಸ್ತ್ರ ಪಡೆಗಳು, ವಿದ್ವಂಸಕ ಕೃತ್ಯ ಪಡೆಗಳು, ಬಾಂಬ್ ನಿಸ್ಕ್ರೀಯ ದಳ ಮತ್ತು ವಿಶೇಷ ಗರುಡ ಪಡೆಯನ್ನೂ ಸಹ ನಿಯೋಜನೆ ಮಾಡಲಾಗಿದೆ. 30ಕೆಎಸ್ ಆರ್ ಪಿ, 20ಎಎಸ್ ಪಿ,2 ಬಿಡಿಡಿಎಸ್, 1ಗರುಡ ಪಡೆಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.