Tuesday, September 29, 2026

BDA Apartments

ಮೈಸೂರು ದಸರಾ ಹೋಗಿ, ಯಡಿಯೂರಪ್ಪ ದಸರಾ ಆಗಿದೆ : ವಾಟಾಳ್ ನಾಗರಾಜ್ ಟೀಕೆ BDA JK_Adv BDA Adv
Home Front Page ಮೈಸೂರು ದಸರಾ ಹೋಗಿ, ಯಡಿಯೂರಪ್ಪ ದಸರಾ ಆಗಿದೆ : ವಾಟಾಳ್ ನಾಗರಾಜ್ ಟೀಕೆ

ಮೈಸೂರು ದಸರಾ ಹೋಗಿ, ಯಡಿಯೂರಪ್ಪ ದಸರಾ ಆಗಿದೆ : ವಾಟಾಳ್ ನಾಗರಾಜ್ ಟೀಕೆ

ಮೈಸೂರು,ಅಕ್ಟೋಬರ್,14,2020(www.justkannada.in)  : ಮೈಸೂರು ದಸರಾ ಹೋಗಿ ಯಡಿಯೂರಪ್ಪ ದಸರಾ ಆಗಿದೆ. ಯಡಿಯೂರಪ್ಪಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಾಗಿಲ್ಲ. ಅವರಿಗೆ ನಗುವುದೇ ಗೊತ್ತಿಲ್ಲ, ಒಂದು ವರ್ಷಕ್ಕೊಮ್ಮೆ ನಗುತ್ತಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಟೀಕಿಸಿದರು.jk-logo-justkannada-logoಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ದಸರಾ ಉತ್ಸವ ನಡೆಯಲೇಬೇಕು ಎಂದು ಆಗ್ರಹಿಸಿ ನಗರದ ಆರ್ಗೇಟ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಲೈಟ್ ಬೇಕು. ಆದರೆ, ಜಂಬೂ ಸವಾರಿ ಬೇಡ?

ಈ ಸಂದರ್ಭ ವಾಟಾಳ್ ನಾಗರಾಜ್ ಮಾತನಾಡಿ, ದಸರಾಗೆ ಲೈಟ್ ಬೇಕು. ಆದರೆ ಜಂಬೂ ಸವಾರಿ ಬೇಡ. ಇದು ಹುಚ್ಚರ ಸರ್ಕಾರ. ದಿನಕೊಬ್ಬ ಮಂತ್ರಿ ಮೈಸೂರಿಗೆ ಬರ್ತಾರೆ. ಇವರೆಲ್ಲರೂ ದಸರಾ ಉತ್ಸವಕ್ಕೆ ಮಂಕು ಬಡಿಸಿದ್ದಾರೆ ಎಂದು ಕಿಡಿಕಾರಿದರು.

ದಸರಾ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ. ಕೊರೋನಾ ಇದೆ ನಿಜ, ಆದರೆ, ದಸರಾವನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಾಡಬಹುದಾಗಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಂಬೂ ಸವಾರಿ ದಿನದಂದು ಸಾರೋಟಿನಲ್ಲಿ ಚಾಮುಂಡೇಶ್ವರಿ ಪ್ರತಿಮೆ ಮೆರವಣಿಗೆ

Mysore-Dasara-2020-Yeddyurappa-Dasara-Vatal Nagaraj-criticism

ಯಡಿಯೂರಪ್ಪ ಪಕ್ಷಾಂತರ ಪಿತಾಮಹ. ಅವರಿಗೆ ಕೇವಲ ಸರ್ಕಾರ  ಉಳಿಸಿಕೊಳ್ಳುವುದು,ಮಂತ್ರಿಗಿರಿ ಹಂಚುವುದು ಇದಿಷ್ಟೇ ಗೊತ್ತಿರೋದು ಎಂದು ಆಕ್ರೋಶವ್ಯಕ್ತಪಡಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕು

ವಿದ್ಯಾಗಮವನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು. ಕೊರೋನಾದಿಂದ ಶಿಕ್ಷಕರು, ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಜಂಬೂ ಸವಾರಿ ದಿನ ನಾವು ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಮೆಯಿಟ್ಟು ಮೆರವಣಿಗೆ ಮಾಡುತ್ತೇವೆ ಎಂದು ತಿಳಿಸಿದರು.

key words : Mysore-Dasara-2020-Yeddyurappa-Dasara-Vatal Nagaraj-criticism