Wednesday, July 29, 2026

BDA Apartments

Home Front Page ಚಂದ್ರವನ ನರ್ಸರಿಗೆ ಭೇಟಿ ನೀಡಿ ಅಲ್ಲಿನ ಗಿಡಗಳ ಬಗ್ಗೆ ಮಾಹಿತಿ ಪಡೆದ ಮೈಸೂರು ಜಿ.ಪಂ...

ಚಂದ್ರವನ ನರ್ಸರಿಗೆ ಭೇಟಿ ನೀಡಿ ಅಲ್ಲಿನ ಗಿಡಗಳ ಬಗ್ಗೆ ಮಾಹಿತಿ ಪಡೆದ ಮೈಸೂರು ಜಿ.ಪಂ ಸಿಇಒ ಯೋಗೇಶ್.

ಮೈಸೂರು,ಆಗಸ್ಟ್,5,2021(www.justkannada.in): ಸರ್ಕಾರಿ ಆರ್ಯುವೇದ ಮೆಡಿಕಲ್ ಕಾಲೇಜಿನ ವ್ಯಾಪ್ತಿಗೆ ಬರುವ ಚಂದ್ರವನ ನರ್ಸರಿಗೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಯೋಗೇಶ್ ಭೇಟಿ ನೀಡಿ ಅಲ್ಲಿ ಬೆಳೆಸಲಾಗುತ್ತಿರುವ ಗಿಡಗಳ ಬಗ್ಗೆ ಮಾಹಿತಿ ಪಡೆದರು.

75ನೇ  ಸ್ವಾತಂತ್ರೋತ್ಸವ ” ಅಜಾದಿ ಕಾ ಅಮೃತ್ ಮಹೋತ್ಸವ್” ಅಂಗವಾಗಿ ಮೈಸೂರು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ  ಸರ್ಕಾರಿ ಕಛೇರಿಗಳು ಮತ್ತು ಸರ್ಕಾರಿ ಶಾಲೆಗಳ ಆವರಣದಲ್ಲಿ ಆರ್ಯುವೇದ ಹಣ್ಣುಗಳನ್ನು ಬಿಡುವ ಮತ್ತು ನೆರಳನ್ನು ನೀಡುವ ಗಿಡಗಳನ್ನು ನೆಟ್ಟು ಬೆಳಸಿ ಉತ್ತಮ ಪರಿಸರ ನಿರ್ಮಿಸುವ ಉದ್ದೇಶವನ್ನ ಹೊಂದಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು  ಮೈಸೂರು ಜಿ.ಪಂ ಸಿಇಒ ಯೋಗೇಶ್  ಅವರು ಸರ್ಕಾರಿ ಆರ್ಯುವೇದ ಮೆಡಿಕಲ್ ಕಾಲೇಜಿನ ವ್ಯಾಪ್ತಿಗೆ ಬರುವ ಚಂದ್ರವನ ನರ್ಸರಿಗೆ  ಭೇಟಿ ನೀಡಿ ಅಲ್ಲಿ ಬೆಳೆಯಲಾಗುವ ಗಿಡಗಳ ಬಗ್ಗೆ  ಆಯುಷ್ ವೈದ್ಯರಿಂದ ಮಾಹಿತಿ ಪಡೆದರು.

ಈ ವೇಳೆ ಆರ್ಯುವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ ಗಜಾನನ ಹೆಗಡೆ ಮತ್ತು ಡಾ ‌‌.ಸಂಧ್ಯಾ ,ಸರ್ಕಾರಿ ಬಿಎಡ್ (ಸಿಟಿಇ)ಕಾಲೇಜಿನ ಪ್ರಾಂಶುಪಾಲರಾದ ಗೀತಾಂಬ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಡಯಟ್ ಪ್ರಾಂಶುಪಾಲರಾದ ರಘುನಂದನ್, ಸಿಟಿಇ ಉಪನ್ಯಾಸಕರಾದ ಕೃಷ್ಣ  ಅವರು ಸಾಥ್ ನೀಡಿದರು.

Key words: mysore ZP- CEO-Yogesh- visited- Chandravana Nursery