ಮೈಸೂರು ಮೃಗಾಲಯ ಪುನಾರಂಭಕ್ಕೆ ಮಾರ್ಗಸೂಚಿ ಪ್ರಕಟ

ಮೈಸೂರು, ಮೇ 21, 2020 (www.justkannada.in): ಮೈಸೂರು ಮೃಗಾಲಯ ಪುನಾರಂಭಕ್ಕೆ ಮೃಗಾಲಯ ಪ್ರಾಧಿಕಾರದಿಂದ ಮಾರ್ಗಸೂಚಿ ಹೊರಡಿಸಿದೆ.

ಕೆಲವೇ ದಿನಗಳಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯ ಪುನಾರಂಭವಾಗಲಿದೆ. ಕೊರೊನ ಸೋಂಕು ಹರಡದಂತೆ ಕ್ರಮವಹಿಸುವಂತೆ ಸೂಚನೆ ಬಂದಿದೆ. ಸಾಮಾಜಿ ಅಂತರ, ಕಡ್ಡಾಯ ಮಾಸ್ಕ್ ಧಾರಣೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜೇಷನ್ ಸೇರಿ ಪ್ರಮುಖ ಅಂಶಗಳ ಮಾರ್ಗಸೂಚಿಯನ್ನು ಮೃಗಾಲಯ ಪ್ರಾಧಿಕಾರ ಸೂಚಿಸಿದೆ.

ಬ್ಯಾರಿಕೇಡ್ ಅಳವಡಿಕೆ, ಉಗುಳುವುದು ಸಂಪೂರ್ಣ ನಿಷೇಧ, ನಿಯಮಗಳನ್ನು ಉಲ್ಲಂಘಿಸಿದವರಿಗೆ ಒಂದು ಸಾವಿರ ರೂ ಡಂಡ ವಿಧಿಸಲಾಗುತ್ತದೆ.