ಕರ್ನಾಟಕದ ವೈಭವ ಪರಿಚಯಿಸುವ ಯೋಜನೆಗೆ ಕೈ ಹಾಕಿದ ಯುವ ಬ್ರಿಗೆಡ್: ಮೈಸೂರಿನಲ್ಲಿ ರೆಲ್ಲೊ ಫ್ಲೆಕ್ಸ್ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ…

ಮೈಸೂರು,ಜೂ,8,2020(www.justkannada.in): ಕರ್ನಾಟಕದ ವೈಭವವನ್ನು ಪರಿಚಯಿಸುವ ಯೋಜನೆಗೆ ಯುವ ಬ್ರಿಗೆಡ್  ಕೈ ಹಾಕಿದ್ದು, ಈ ಅಂಗವಾಗಿ ಮೈಸೂರಿನಲ್ಲಿ ರೆಲ್ಲೊ ಫ್ಲೆಕ್ಸ್ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕದ ಐತಿಹಾಸಿಕ , ಪೌರಾಣಿಕ , ಸಾಹಿತ್ಯಕ , ಪಾರಿಸರಿಕ ಮೌಲ್ಯಗಳುಳ್ಳ ಸ್ಥಳಗಳನ್ನು ಗುರುತಿಸುವ ಕಾರ್ಯಕ್ರಮವನ್ನ ಯುವ ಬ್ರಿಗೇಡ್ ನಡೆಸುತ್ತಿದೆ. ರೆಲ್ಲೊ ಫ್ಲೆಕ್ಸ್ ಅಳವಡಿಸಿ ಸಂಪೂರ್ಣ ಮಾಹಿತಿಗಳನ್ನೊಂದಿಗೆ  ರೆಲ್ಲೊ ವೆಬ್ ಸೈಟ್ ನಲ್ಲಿ ಅಳವಡಿಕೆ ಮಾಡಲಾಗುತ್ತದೆ.

ಇನ್ನು ರಾಷ್ಟ್ರಕವಿ ಕುವೆಂಪು ಅವರ ಮನೆಯ ಮುಂಭಾಗ ರೆಲ್ಲೊ ಪ್ಲೆಕ್ಸ್  ಅಳವಡಿಸಿವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಕುವೆಂಪು ರವರ “ಉದಯ ರವಿ” ಯಿಂದ ಆರಂಭವಾಗಿದ್ದು, ಕಾರ್ಯಕ್ರಮವನ್ನ  ಕುವೆಂಪು ಅವರ ಪುತ್ರಿ ತಾರಿಣಿ ಹಾಗೂ ಅಳಿಯ ಡಾ. ಚಿದಾನಂದ ಮೂರ್ತಿ ಉದ್ಘಾಟಸಿದರು. ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಈ ವೇಳೆ ಭಾಗಿಯಾಗಿದ್ದರು.mysore-young-brigade-rello-flex-adaptation-program-mysore

ಕಾರ್ಯಕ್ರಮ ಉದ್ಘಾಟನೆ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ,  ನಾಡಿನ ಹಲವು  ಸ್ಥಳಗಳ ಪರಿಚಯ ಕಾರ್ಯ ಇದು. ನಾಡಿನ ವರ್ತಮಾನದ ವ್ಯಕ್ತಿ ಎಷ್ಟು ಮುಖ್ಯವೊ ಈ ನಾಡಿನ ಹಳೆಯ ವ್ಯಕ್ತಿಗಳು, ಸ್ಥಳಗಳು ಕೂಡ ಅಷ್ಟೆ ಮುಖ್ಯ. ಹಳೆಯದನ್ನ ನೆನಪಿಸಿಕೊಡುವ ಉದ್ದೇಶ ಇದಾಗಿದೆ. ಸಮಾಜಕ್ಕೆ ಹಲವರು ಪುಣ್ಯ ಪುರುಷರು ಬಂದಿದ್ದಾರೆ. ಅವುಗಳೆಲ್ಲವನ್ನು ಪರಿಚಯಿಸಿವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಹಾಗೆಯೇ ಮೈಸೂರಿನಲ್ಲಿ ಇನ್ನು ಪ್ರವಾಸಿತಾಣ ಕೇವಲ ಅರಮನೆ, ಜೂ ಅಷ್ಟೇ ಅಲ್ಲ. ಇನ್ನು ಸಾಕಷ್ಟು ಸ್ಥಳಗಳು ಇವೆ. ಕರ್ನಾಟಕದ ಬಾವುಟದ ಬಣ್ಣಗಳ ಎಲ್ಲೊ ಮತ್ತು ರೆಡ್ ಪ್ಲೆಕ್ಸ್ ಹಾಕುಲಾಗುತ್ತೆ. ಜೊತೆಗೆ ಸಂಪೂರ್ಣ ಮಾಹಿತಿಯಿಂದಿಗೆ ಇದನ್ನು ವೆಬ್  ನಲ್ಲಿ ಅಳವಡಿಕೆ ಮಾಡಲಾಗುತ್ತೆ. ಕರ್ನಾಟಕದಲ್ಲಿ ನೋಡೇಬೇಕಾದ ಸೂಕ್ಷ್ಮ ಜಾಗಗಳನ್ನ ಗುರುತಿಸಲಾಗುತ್ತೆ. ಪ್ರವಾಸೋದ್ಯಮಕ್ಕೂ ಇದು ಪೂರಕವಾಗಲಿದೆ. 60 ಕ್ಷೇತ್ರಗಳನ್ನು ರಾಜ್ಯದಾದ್ಯಂತ ಗುರುತಿಸಿದ್ದೇವೆ.  ಇವತ್ತು ಮೈಸೂರಿನ ಮುದ್ದೇನಹಳ್ಳಿ, ಸುಧರ್ಮ ಸಂಸ್ಕೃತ ಪತ್ರಿಕೆ ಸೇರಿದಂತೆ ಹಲವು ಸಾಹಿತಗಳ ಮನೆಗಳನ್ನ ಗುರುತಿಸಿ ಫ್ಲೆಕ್ಸ್ ಅಳವಡಿಸಲಾಗುತ್ತೆ ಇಡೀ ಜಗತ್ತಿಗೆ ನಾಡನ್ನ ಪರಿಚಯಿಸುವ ಕೆಲಸ ಇದಾಗಿದೆ ಎಂದು ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ ಹೇಳಿದರು.

Key words: mysore- Young Brigade -Rello Flex -Adaptation Program – Mysore.