ಜಮೀನಿಗೆ ತೆರಳಿದ್ದ ಮಹಿಳೆಯನ್ನ ಕಲ್ಲಿನಿಂದ ಜಜ್ಜಿ  ಹತ್ಯೆ ಮಾಡಿದ ದುಷ್ಕರ್ಮಿಗಳು…

ಮೈಸೂರು,ಸೆ,2019(www.justkannada.in): ಜಮೀನಿಗೆ ತೆರಳಿದ್ದ ವೇಳೆ ಮಹಿಳೆ ತಲೆ ಮೇಲೆ ಕಲ್ಲಿನಿಂದ ಜಜ್ಜಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ರಜಿನಿ(35) ಕೊಲೆಯಾದ ಮಹಿಳೆ.ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ‌ ಬಿಳಿಗೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಳಿಗೆರೆ ಗ್ರಾಮದ ಶಿವಣ್ಣೇಗೌಡ ಎಂಬುವವರ ಪತ್ನಿ ರಜಿನಿ ಜಮೀನಿಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: mysore- women- murder