ಪ್ರೀತಿಸಿ ವಿವಾಹವಾದ ದಂಪತಿ ನಡುವೆ ವಿರಸ: ಪತಿ ಆತ್ಮಹತ್ಯೆಗೆ ಶರಣು.

ಮೈಸೂರು,ಜುಲೈ,22,2021(www.justkannada.in): ಪ್ರೀತಿಸಿ ವಿವಾಹವಾದ ದಂಪತಿ ನಡುವೆ ವಿರಸ ಉಂಟಾಗಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮೊಹಮದ್ ವಾಸಿಂ(24) ಮೃತ ನೇಣಿಗೆ ಶರಣಾಗಿರುವ ವ್ಯಕ್ತಿ. ಮೊಹಮದ್ ವಾಸಿಂ ಶಕ್ತಿ ನಗರ ನಿವಾಸಿಯಾಗಿದ್ದು ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಮೂರು ವರ್ಷಗಳ ಹಿಂದೆ ಮನೆಯವರ ವಿರೋಧ ಲೆಕ್ಕಿಸದೆ ಶಾಂತಿನಗರ ನಿವಾಸಿ ಶಬಾನಾಳನ್ನ ಪ್ರೀತಿಸಿ ವಿವಾಹವಾಗಿದ್ದ.

ಈ ಮಧ್ಯೆ  ಮನೆಯವರ ವಿರೋಧ ಹಿನ್ನಲೆ. ಮೈಸೂರಿನ ಎನ್.ಆರ್. ವೃತ್ತದಲ್ಲಿ ಪ್ರತ್ಯೇಕವಾಗಿ ಸಂಸಾರ ನಡೆಸುತ್ತಿದ್ದರು. ಕುಡಿತದ ಚಟಕ್ಕೆ ದಾಸನಾಗಿದ್ದ ಮೊಹಮದ್ ವಾಸೀಂ ಆಗಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದ. ಈ ವಿಚಾರದಲ್ಲಿ ದಂಪತಿ ನಡುವೆ ವಿರಸ ಮೂಡಿತ್ತು.mysore-suicide-young-man-caught-financial-hardship

ಅಲ್ಲದೆ ಲಾಕ್ಡೌನ್ ವೇಳೆ ಆದಾಯವಿಲ್ಲದೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ಮೊಹಮದ್ ವಾಸೀಂ ಇವೆಲ್ಲಾ ಬೆಳವಣಿಗೆ ಹಿನ್ನಲೆ ಮನನೊಂದು ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-  wife-conflict-Husband- suicide.