ಸ್ಟ್ರಿಕ್ಟಾಗಿ ವೆಜ್ ಪಾಲಿಸುತ್ತಿದ್ದ ಮೈಸೂರಿನ ಆ ಹೋಟೆಲ್ ನಲ್ಲಿ ನಾನು ಸಹ ಅಷ್ಟೆ ಸ್ಟ್ರಿಕ್ಟ್ ಆಗಿ ನಾನ್ ವೆಜ್ ಪಾಲಿಸುತ್ತಿದ್ದೆ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು..!

 

ಮೈಸೂರು, ಜು.13, 2019 : (www.justkannada.in news) ಕರ್ನಾಟಕದ ಆಹಾರ ಪದಾರ್ಥಗಳನ್ನು ನೆನೆಸಿಕೊಂಡ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ರಾಗಿ ಮುದ್ದೆ, ನಾಟಿ ಕೋಳಿ ಸಾರು, ಬಿಸಿಬೇಳೆ ಬಾತು, ಇಡ್ಲಿ, ರವೆ ಇಡ್ಲಿ ಸಾಲು ಸಾಲು ಆಹಾರ ಪದಾರ್ಥಗಳ ಹೆಸರು ಹೇಳಿ ವಿದ್ಯಾರ್ಥಿಗಳ ಬಾಯಲ್ಲಿ ನೀರೂರಿಸಿದ ಘಟನೆ ಶನಿವಾರ ನಡೆಯಿತು.

ಇಲ್ಲಿನ ಸಿಐಐಎಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಉಪರಾಷ್ಟ್ರತಿ ವೆಂಕಯ್ಯ ನಾಯ್ಡು ಭಾಷಣದ ನಡುವೆ ಮೈಸೂರಿನ ಶಾಖಾಹಾರವನ್ನು ನೆನಪು ಮಾಡಿಕೊಂಡರು.

ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ನೆನೆಸಿಕೊಂಡ ಉಪರಾಷ್ಟ್ರಪತಿ. ಅದು ಸ್ಟ್ರಿಕ್ಟಾಗಿ ವೆಜ್ ಪಾಲಿಸುತ್ತಿದ್ದ ಹೋಟೆಲ್. ಆದ್ರೇ ನಾನು ಸ್ಟ್ರಿಕ್ಟ್ ಆಗಿ ನಾವ್ ವೆಜ್ ಪಾಲಿಸುತ್ತಿದ್ದ ವ್ಯಕ್ತಿ. ಈಗಾಗಿ ಹೊರಗಡೆ ಹೋಗಿ ಆರ್.ಆರ್. ಹೋಟೆಲ್ ನಲ್ಲಿ ತಿಂದು ಬರುತ್ತಿದ್ದೆ.
ನಮ್ಮ ಹಿರಿಯರು ಹಮಾಮಾನಕ್ಕೆ ತಕ್ಕಂತೆ ಕಾಲದಿಂದ ಕಾಲಕ್ಕೆ ಆಹಾರ ಬಳಸುವುದನ್ನು ಹೇಳೊಕೊಟ್ಟಿದ್ದಾರೆ. ಆದ್ರೇ ನಾವೀಗ ವಿದೇಶಿ ಆಹಾರ ಪದ್ದತಿಗೆ ಮಾರು ಹೋಗುತ್ತಿದ್ದೆವೆ. ಇದು ಸರಿ ಅಲ್ಲ.

ಮೈಸೂರು ಬಹಳ ಸುಂದರವಾಗಿದೆ ಅದಕ್ಕೆ ಮೈಸೂರು ಮಹಾರಾಜರ ಕೊಡುಗೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಸಚಿವನಾಗಿದ್ದಾಗ ಮೈಸೂರು ದೇಶದಲ್ಲಿಯೇ ನಂಬರ್ ಸ್ವಚ್ಛತಾ ನಗರವಾಗಿತ್ತು. ಮೈಸೂರು ಸ್ವಚ್ಛನಗರವಾಗಲು ಇಲ್ಲಿನ ಜನರ ಶ್ರಮ ಬಹಳ ಇದೆ.

ಯಾವುದೇ ಅಭಿವೃದ್ಧಿಯಾಗಲು ಸರ್ಕಾರಗಳ ಕೆಲಸಗಳಷ್ಟೇ ಸಾಲದು. ಜನರು ಸಹಭಾಗಿತ್ವ ಕೂಡ ಬಹಳಷ್ಟಿದೆ. ಕೇವಲ ಪ್ರಧಾನಿ ನರೇಂದ್ರ ಮೋದಿ ಅಥವಾ ಸಿಎಂ ಕುಮಾರಸ್ವಾಮಿಯಿಂದ ಅಲ್ಲ. ಕುಮಾರಸ್ವಾಮಿ ಹೆಸರು ಬಳಸಿ ಬಳಿಕ‌ ಯಾವುದು ನಿಮ್ಮ ಸ್ವಾಮಿ ಇರ್ಲಿ ಎಂದ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು.

——
key words : mysore-vice-president-venkaiaha.naidu-vegetarian-non.veg-hotel