ದೇಶ‌ ಪ್ರಗತಿ ಹೊಂದಲು ಯುವಜನರಿಗೆ ಶಿಕ್ಷಣ, ಉದ್ಯೋಗ ಅವಶ್ಯಕ- ಇಂದರ್ ಇಕ್ಬಲ್ ಸಿಂಗ್ ಅತ್ವಲ್ ಅಭಿಪ್ರಾಯ.

ಮೈಸೂರು,ಸೆಪ್ಟಂಬರ್,14,2022(www.justkannada.in):  ದೇಶದ ಅಭಿವೃದ್ಧಿಗೆ ಹಾಗೂ ಯುವ ಜನಾಂಗ ಬೆಳೆಯಬೇಕಾದರೆ ಶಿಕ್ಷಣ ಹಾಗೂ ಉದ್ಯೋಗ ಎಂದು ಡಾ.ಬಿ.ಆರ್.ಅಂಬೇಡ್ಕರ್  ಛೇಂಬರ್ ಆಫ್ ಕಾಮರ್ಸ್‌ ನ ಮಹಾನಿರ್ದೇಶಕ ಇಂದರ್ ಇಕ್ಬಲ್ ಸಿಂಗ್ ಅತ್ವಲ್ ಅಭಿಪ್ರಾಯ ಪಟ್ಟರು.

ಡಾ.ಬಿ.ಆರ್ .ಅಂಬೇಡ್ಕರ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸಾಮಾಜಿಕ ನ್ಯಾಯ ವೇದಿಕೆ ವತಿಯಿಂದ ಮಾನಸ ಗಂಗೋತ್ರಿಯ ವಿಜ್ಞಾನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮುದಾಯ ಆರ್ಥಿಕತೆ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ಎಸ್‌ಸಿ, ಎಸ್ ಟಿ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಕರು, ಉದ್ಯೋಗ ಹುಡುಕುವ ಬದಲು, ಉದ್ಯೋಗ ನೀಡುವಂತಹ ಮನೋಭಾವನೆ ಬೆಳೆಸಬೇಕು. ಕಾಲೇಜಿನ ದಿನಗಳಲ್ಲಿ ಜೀವನ ರೂಪಿಸಿಕೊಳ್ಳಲು ಆಲೋಚನೆಯನ್ನು ಮೈಗೂಡಿಸಿಕೊಳ್ಳಬೇಕು. ಓದುವ ಸಂದರ್ಭದಲ್ಲಿ ಜೀವನದ ತಿರುವು ಸಿಗುತ್ತವೆ. ಯುವಕರು ಬೆಳೆದಷ್ಟು ದೇಶ ಬೆಳೆಯುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಭಿವೃದ್ಧಿಯಾದರೆ ದೇಶ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟ ಹಾಗೂ ಅವರ ಅನುಸರಿಸಿದ ಮಾರ್ಗಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಅವರ ಹೋರಾಟ ಹಾಗೂ ಸಾಧನೆ ನಮಗೆಲ್ಲ ಸ್ಪೂರ್ತಿದಾಯಕವಾಗಿದೆ. ನಾವು ಕೂಡ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಭಾವನೆ ಬರಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಅರ್ಥಶಾಸಜ್ಞ ಕೂಡ ಹೌದು. ದೇಶದಲ್ಲಿ ಆರ್ಥಿಕತೆಯ ಸಮತೋಲನವನ್ನು ಹೇಗೆ ಕಾಪಾಡಬೇಕು ಎಂಬುವುದರ ಬಗ್ಗೆ ಹೇಳಿದ್ದಾರೆ. ಇವರ ಮಾಹಿತಿಯನ್ನು ಅರ್ಥಶಾಸ್ತ್ರಜ್ಞರಾದ ಅಮೃರ್ತ್ಯ ಸೇನ್ ಕೂಡ ಮೆಚ್ಚಿಕೊಂಡಿದ್ದಾರೆ ಎಂದು ತಿಳಿಸಿದರು.

ಅನುದಾನಗಳ ಬಳಕೆಯಿಂದ ಸಮುದಾಯಗಳು ಆರ್ಥಿಕತೆ ಹಾಗೂ ಸಾಮಾಜಿಕತೆಯಲ್ಲಿ ಸುಧಾರಣೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮೀಸಲಿಡುವ ಅನುದಾನವನ್ನು ಪಡೆದುಕೊಂಡು, ಮುಂದೆ ಬರಬೇಕು. ಸರಕಾರಗಳು ಎಸ್‌ ಸಿ. ಎಸ್‌ ಟಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರ ಮಾಹಿತಿ ಅರಿತು ಸದುಪಯೋಗ ಪಡೆದಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಎಸ್‌.ಸಿ ಕಚೇರಿ ಉಸ್ತುವಾರಿ ಸಿರಿ ಪ್ರಕಾಶ್ ತನ್ವರ್, ಮೈಸೂರಿನ ಆರ್‌ ಎಸ್‌ ಎಸ್‌ ನ ಸಮಿತಿ ಕಾರ್ಯನಿರ್ವಾಹಕ ಮಾ.ವೆಂಕಟೇಶ್, ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮಾನಸ ಗಂಗೋತ್ರಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್.ಗಂಗಾಧರ್, ಸಾಮಾಜಿಕ ಕಾರ್ಯ ವಿಭಾಗದ ಪ್ರೊ.ಜ್ಯೋತಿ ಮತ್ತಿತರರು ಹಾಜರಿದ್ದರು.

Key words: mysore university- Inder Iqbal Singh Atwal – education – employment -youth

ENGLISH SUMMARY….

Providing education, and employment for youth is essential for the progress of the country: Inder Iqbal Singh Atwal
Mysuru, September 14, 2022 (www.justkannada.in): “Providing education and employment to the youth is essential for the growth of our country and youth,” observed Inder Iqbal Singh Atwal, Director General of the Dr. B.R. Ambedkar Chamber of Commerce.
He participated in the ‘SC, ST in Community Economy and Social Development,’ organized by the Dr. B.R. Ambedkar Chamber of Commerce, in association with the University of Mysore and Social Justice Forum, held at the Science Auditorium in the Manasa Gangotri campus.
In his address, he said, “instead of hunting for jobs, youth should develop a mindset of becoming entrepreneurs and job providers. Students should develop thoughts of shaping their lives during College days. Your life will take a turn during your learning years. The progress of the country is depending upon the growth of youth. Development in social and educational sectors will help the development of the country.”
“Students should follow Dr. B.R. Ambedkar’s principles. His struggle and achievement should become an inspiration for all of us. We should also think of contributing something to society. Dr. B.R. Abmedkar was also an economist. He has taught us how to manage the economical balance of the country. Economist Amartya Sen also has agreed and appreciated this information,” he added.
BJP SC Office Incharge Siri Prakash Tanwar, Mysuru RSS Committee Executive Ma. Venkatesh, Vice-Chancellor Prof. G. Hemanth Kumar, Manasa Gangotri Human Science Research Division Head Prof. M.R. Gangadhar, Prof. Jyothi of Social Science Department, and others were present.
Keywords: University of Mysore/ education/ employment/ youth