ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ಹೊಸ ಆಕರ್ಷಣೆಗಳು…!

ಮೈಸೂರು,ಡಿಸೆಂಬರ್,26,2020(www.justkannada.in) : ಭಾರತೀಯ ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ ಮತ್ತು ಸಹಾಯಕರ ಪ್ರತಿಮೆಗಳನ್ನು ಹುಬ್ಬಳ್ಳಿಯ ನೈಋತ್ಯ ವಲಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ವಲಯ ಅಧ್ಯಕ್ಷರಾದ ಸುಜಾತಾ ಸಿಂಗ್ ಅನಾವರಣಗೊಳಿಸಿದರು.Teachers,solve,problems,Government,bound,Minister,R.Ashokಭಾರತೀಯ ರೈಲ್ವೆಯಲ್ಲಿ ಅತ್ಯಂತ ಹೇರಳವಾಗಿ ಕಾಣಸಿಗುವ ಇಬ್ಬರು – ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ (ಈ ಹಿಂದೆ ಆರ್‌.ಪಿ.ಎಫ್.) ಮತ್ತು ಸಹಾಯಕ (ಈ ಮೊದಲು ಪೋರ್ಟರ್ ಎಂದು ಕರೆಯಲಾಗುತ್ತಿತ್ತು) ಪ್ರತಿಮೆಗಳನ್ನು ಮೈಸೂರು ರೈಲ್ವೆ ಸಂಗ್ರಹಾಲಯದಲ್ಲಿ ಅನಾವರಣಗೊಳಿಸಿದರು.

Mysore Train-New-attractions-museum ...!

ರೈಲ್ವೆ ಸಂಗ್ರಹಾಲಯದಲ್ಲಿನ ಈ ಹೊಸ ಆಕರ್ಷಣೆಗಳು ಸಂದರ್ಶಕರಿಗೆ ಈ ಎರಡು ವಿಭಿನ್ನ ಜನರ ಗುಂಪುಗಳು ಬಹಳಷ್ಟು ವರ್ಷಗಳಿಂದ ರೈಲ್ವೆಗೆ ಹೇಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

 

ಈ ಸಂದರ್ಭದಲ್ಲಿ ಮೈಸೂರಿನ ಮಹಿಳಾ ಕಲ್ಯಾಣ ಸಂಸ್ಥೆಯ ವಿಭಾಗದ ಅಧ್ಯಕ್ಷರಾದ  ಕಲಿಕ ಅಗರ್‌ವಾಲ್ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

key words : Mysore Train-New-attractions-museum …!