ಸರ್ಕಾರ ಸೀಜ್ ಮಾಡಿದ ಮನೆಗೆ ನುಗ್ಗಿದ ಕಳ್ಳರು: ವಸ್ತುಗಳನ್ನು ದೋಚಲು ಯತ್ನ?

ಮೈಸೂರು,ಅಕ್ಟೋಬರ್,21,2025 (www.justkannada.in): ಸರ್ಕಾರ ಸೀಜ್ ಮಾಡಿದ ಮನೆಗೆ ಕಳ್ಳರು ನುಗ್ಗಿರುವ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ದಾರ್ ವಲ್ಲಭಬಾಯಿ ಪಟೇಲ್ ನಗರದಲ್ಲಿ ನಡೆದಿದೆ.

ಗ್ರೀನ್ ಬಡ್ಸ್ ಆಗ್ರೋ ಫಾರಂ ಪ್ರೈ.ಲಿ.ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಈ ಮನೆಯನ್ನು 14 ವರ್ಷಗಳ ಹಿಂದೆ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.  ಕಳ್ಳರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸ್ತುಗಳ ಚೆಲ್ಲಾಪಿಲ್ಲಿಯಾಗಿದ್ದವು. ಮನೆಯಲ್ಲಿದ್ದ ವಸ್ತುಗಳನ್ನ ದೋಚಲು ಕಳ್ಳರು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.

ಇನ್ನು ಮನೆಯಲ್ಲಿರುವ ಚರಾಸ್ಥಿಗಳನ್ನ ಸ್ಥಳಾಂತರಿಸುವ ಉದ್ದೇಶದಿಂದ ಸೀಜ್ ಆದ ಮನೆಗೆ ತಹಸೀಲ್ದಾರ್ ಶಿರೀನ್ ತಾಜ್, ಕಾನೂನು ಅಧಿಕಾರಿ ರಕ್ಷಿತ್ ಹಾಗೂ ರಾಜಸ್ವ ನಿರೀಕ್ಷಕರಾದ ಹೇಮಂತ್ ಕುಮಾರ್ ಭೇಟಿ ನೀಡಿದ್ದು,ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಸೀಜ್ ಮಾಡಿದ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಹಿಂಬದಿಯಲ್ಲಿರುವ ಸೀಜ್ ಮಾಡದಿರುವ ಬಾಗಿಲ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದೆ.  ಅಪರಿಚಿತ ವ್ಯಕ್ತಿಗಳು ಬಾಗಿಲು ಹೊಡೆದು ಪ್ರವೇಶಿಸಿರೋದು ಖಚಿತವಾಗಿದ್ದು, ಆಲನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದಾಗಿದ್ದು. ಸೀಜ್ ಆಗಿದ್ದ ಮನೆಗೆ ಯಾವುದೇ ಭದ್ರತೆ ಒದಗಿಸಿರಲಿಲ್ಲ. ಇದರಿಂದ ಕಿಡಿಗೇಡಿಗಳು ಬಾಗಿಲು ಮುರಿದು ಒಳ ನುಗ್ಗಿದ್ದಾರೆ‌. ಹೀಗಾಗಿ ಮನೆಗೆ ಸಿಬ್ಬಂದಿ ನಿಯೋಜಿಸುವಂತೆ ಪೊಲೀಸರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Key words: Mysore, Thieves, government, seized house