ಮೈಸೂರು: ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನೇ ಕತ್ತರಿಸಿ ಕದ್ದೊಯ್ದ ಕಳ್ಳರು….

ಮೈಸೂರು,ಅ,22,2019(www.justkannada.in): ಮನೆ ಮುಂದೆ ಬೆಳೆಸಿದ್ದ ಗಂಧದ ಮರವನ್ನ ಕತ್ತರಿಸಿ ಕಳ್ಳರು ಕದ್ದೊಯ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕುವೆಂಪುನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ರಾಜಶೇಖರ್ ಎಂಬುವವರು ತಮ್ಮ ಮನೆ ಮುಂದೆ ಬೆಳೆಸಿದ್ದ ಮರಕ್ಕೆ ಕಳ್ಳರು ಕನ್ನ ಹಾಕಿರುವುದು.  ಪೊಲೀಸ್ ಠಾಣೆಗೆ 200ಮೀಟರ್ ಅಂತರದಲ್ಲಿಯೇ  ಕಳ್ಳರು ತಮ್ಮ  ಕೈ ಚಳಕ ತೋರಿದ್ದಾರೆ.

ರಾಜಶೇಖರ್ ಸುಮಾರು 13 ವರ್ಷಗಳಿಂದ ಈ ಗಂಧದವರನ್ನ ಬೆಳೆಸಿ ಅಂದಿನಿಂದಲೂ ಅರೈಕೆ ಮಾಡಿಕೊಂಡು ಬಂದಿದ್ದರು. ಆದರೆ ನಿನ್ನೆ ರಾತ್ರಿ ಮಳೆ ಬೀಳುವ ವೇಳೆಯೇ ಮರಗಳ್ಳರು ಮರದ ಬುಡ ಸಮೇತ ಕತ್ತರಿಸಿ ಕೊಂಡೊಯ್ದಿದ್ದಾರೆ. ಮರದ ಸುತ್ತ ಪ್ಲಾಸ್ಟಿಕ್ ಪೈಪ್ ಗಳನ್ನು ಅಳವಡಿಸಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

ಈ ಕುರಿತು ರಾಜಶೇಖರ್ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅರಣ್ಯ ಇಲಾಖೆಯವರಿಗೆ  ಹೇಳ್ರಿ ಎಂದು ಪೊಲೀಸರು ಉಡಾಫೆ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿಯ ಘಟನೆಗಳು ನಡೆದರೇ ಪೊಲೀಸರಿಂದ ರಕ್ಷಣೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Key words: mysore-Theft – sandalwood­-tree- police