Thursday, November 5, 2026

Dasara Wishes

Happy Dasara
Home Front Page ಸಿಬಿಎಸ್ ಇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್ 2024ರಲ್ಲಿ ಸಾಧನೆ ಮಾಡಿದ ಮೈಸೂರು ವಿದ್ಯಾರ್ಥಿನಿ  

ಸಿಬಿಎಸ್ ಇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್ 2024ರಲ್ಲಿ ಸಾಧನೆ ಮಾಡಿದ ಮೈಸೂರು ವಿದ್ಯಾರ್ಥಿನಿ  

ಮೈಸೂರು, ಅಕ್ಟೋಬರ್,17,2024 (www.justkannada.in):  ಎಸ್‌ ವಿಐ ಪಬ್ಲಿಕ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಯುಕ್ತಿ, ಸಿಬಿಎಸ್ಇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್ 2024ರಲ್ಲಿ ಅಂಡರ್-14 ಲಾಂಗ್ ಜಂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮೈಸೂರಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.

ವರಣಾಸಿಯ ಸಂತ ಅತುಲನಂದದಲ್ಲಿ ನಡೆದ ಸ್ಪರ್ಧೆಯಲ್ಲಿ ಯುಕ್ತಿ 4.95 ಮೀಟರ್ ಉದ್ದದ ಜಿಗಿತದ ಮೂಲಕ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಿ ಸಾಧನೆ ಮಾಡಿದರು.

ಮೈಸೂರಿನ ಹೆಬ್ಬಾಳದ ನಿವಾಸಿಗಳಾದ ಕಿಶೋರ್ ಕುಮಾರ್ ಮತ್ತು ನಂದಿನಿ ದಂಪತಿಯ ಪುತ್ರಿಯಾಗಿರುವ ಯುಕ್ತಿ, ತನ್ನ ಅನನ್ಯ ಕ್ರೀಡಾ ಪ್ರದರ್ಶನದ ಮೂಲಕ ತನ್ನ ಶಾಲೆಯಷ್ಟೇ ಅಲ್ಲ, ಮೈಸೂರಿಗೊಂದು ಪ್ರಶಸ್ತಿ ತಂದುಕೊಟ್ಟಿದ್ದಾರೆ.

ದೇಶದ ವಿವಿಧೆಡೆಗಳಿಂದ ಬಂದ ಉತ್ತಮ ಕ್ರೀಡಾಪಟುಗಳೊಂದಿಗೆ ಪೈಪೋಟಿ ನಡೆಸಿ, ತಮ್ಮ ಪರಿಶ್ರಮ ಮತ್ತು ಅಭ್ಯಾಸದಿಂದ ಯುಕ್ತಿ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಾಧಿಸಿದ್ದಾರೆ.

Key words: Mysore, student, achieved, CBSE National Athletics Championship 2024