Friday, September 18, 2026

BDA Apartments

ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದ್ರೂ ಸಿಗದ ಸೀಟು: ವಿದ್ಯಾರ್ಥಿನಿಯ ಅಳ...
Home Front Page ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದ್ರೂ ಸಿಗದ ಸೀಟು: ವಿದ್ಯಾರ್ಥಿನಿಯ ಅಳಲು.

ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದ್ರೂ ಸಿಗದ ಸೀಟು: ವಿದ್ಯಾರ್ಥಿನಿಯ ಅಳಲು.

ಮೈಸೂರು,ಜೂನ್,7,2024 (www.justkannada.in): ಮೌಲ್ಯಮಾಪಕರ ಬೇಜವಾಬ್ದಾರಿತನದಿಂದಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಪಡೆದರೂ ಸಹ ಕಾಲೇಜು ಪ್ರವೇಶಾತಿಗೆ ಸಮಯ ಮುಗಿದಿರುವ ಹಿನ್ನೆಲೆ ಸೀಟು ಸಿಗದೇ ಕಂಗಾಲಾಗಿದ್ದಾರೆ.

ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಕೊಡಗಳ್ಳಿ ಗ್ರಾಮದ ಶ್ರೀನಿವಾಸ್-ಸುಮ ದಂಪತಿ ಪುತ್ರಿಯಾಗಿರುವ ಶ್ರಾವ್ಯ ಎಸ್ ಎಸ್ ಎಸಲ್ ಸಿ ಪರೀಕ್ಷೆ ಬರೆದು 545 ಗಳಿಸಿದ್ದರು. ಆದರೆ ಫಲಿತಾಂಶ ಪ್ರಕಟಗೊಂಡಾಗ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬರದ ಕಾರಣ ವಿದ್ಯಾರ್ಥಿನಿ ಶ್ರಾವ್ಯ ತೀವ್ರ ಮನನೊಂದಿದ್ದರು.

ಬಳಿಕ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಈ ವೇಳೆ   606 ಅಂಕ ಗಳಿಸಿದ್ದಾರೆ.  ಮೌಲ್ಯಮಾಪನ ವೇಳೆ ಮೌಲ್ಯಮಾಪಕರ ಬೇಜವಾಬ್ದಾರಿತನದಿಂದ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರಾವ್ಯಗೆ ಮರು ಮೌಲ್ಯಮಾಪನದ ಬಳಿಕ 606 ಅಂಕ ಲಭ್ಯವಾಗಿದೆ.ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದ್ರೂ ಸಿಗದ ಸೀಟು sslc

ಆದರೆ ಪ್ರತಿಷ್ಠಿತ ಕಾಲೇಜಿಗೆ ಮುಂದಿನ ವ್ಯಾಸಂಗಕ್ಕೆ ಸೇರ ಬಯಸಿದ್ದ ಶ್ರೇಯಾಗೆ ತೊಂದರೆಯಾಗಿದೆ. ಈ‌ ಮೊದಲು ಕಡಿಮೆ ಅಂಕ ಬಂದಿದ್ದರಿಂದ ಬಯಸಿದ ಕಾಲೇಜಿನಲ್ಲಿ ಸೀಟು ಸಿಕ್ಕಿರಲಿಲ್ಲ. ಇದೀಗ ಹೆಚ್ಚು ಅಂಕ ಬಂದಿದ್ದರೂ ಕಾಲೇಜು ಪ್ರವೇಶಾತಿಗೆ ಸಮಯ ಮುಗಿದಿರುವುದರಿಂದ ವಿದ್ಯಾರ್ಥಿನಿ ಕಂಗಾಲಾಗಿದ್ದಾರೆ.

ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿನಿ ಶ್ರೇಯಾ ಮತ್ತು ಪೋಷಕರು ಹಾಗು ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಮುಂದೆ ಯಾವುದೇ ವಿದ್ಯಾರ್ಥಿಗೂ ಈ ರೀತಿ ಆಗದಂತೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದ್ದಾರೆ.

Key words: mysore-SSLC-Student-Revaluation