ಮೈಸೂರು:  ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು.

ಮೈಸೂರು,ಮಾರ್ಚ್,28,2022(www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುವಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ನಡೆದಿದೆ.

ಟಿ.ನರಸೀಪುರ ವಿದ್ಯೋದಯ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಕ್ಕೂರು ನಿವಾಸಿ ಅನುಶ್ರೀ ಮೃತಪಟ್ಟ ವಿದ್ಯಾರ್ಥಿನಿ. ಅನುಶ್ರೀ ಮಾದಾಪುರ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಈ ನಡುವೆ ಇಂದು ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿ ಅನುಶ್ರೀ ಕುಸಿದು ಬಿದ್ದಿದ್ದು ತಕ್ಷಣ ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿದ್ಯಾರ್ಥಿನಿ ಅನುಶ್ರೀ ಮೃತಪಟ್ಟಿದ್ದಾರೆಂದು ಮಾಹಿತಿ ತಿಳಿದು ಬಂದಿದೆ. ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Key words: Mysore-SSLC- student -death

ENGLISH SUMMARY…

Student collapses while writing SSLC exams
Mysuru, March 28, 2022 (www.justkannada.in): A girl student collapsed and died while writing the SSLC exams.
The incident has occurred in T. Narasipur, in Mysuru District today. The girl is identified as Anushri, a resident of Akkuru. She was writing her SSLC exams at the Vidyodaya Examination center in T. Narasipura today. Anushri was a 10th standard student of the school in Madapura.
She collapsed while writing the exams. She was immediately taken to the government hospital in T. Narasipur. She reportedly breathed her last in the hospital.
Keywords: Student/ SSLC exams/ collapses/ dies