ಅವರಿಗೆ ರೈತರ ಕಷ್ಟ ಏನು ಗೊತ್ತು ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಂಸದೆ ಶೋಭಾ ಕರಂದ್ಲಾಜೆ..

ಮೈಸೂರು,ಅ,7,2019(www.justkannada.in): ಸಂಸದೆ ಶೋಭಾಕರಂಧ್ಲಾಜೆಗೆ ರೈತರ ಕಷ್ಟ ಏನು ಅಂತಾ ಗೊತ್ತು ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ನಮ್ಮ ಊರು ಯಾವುದೆಂದು ಬಂದು ನೋಡಲಿ. ಆಗ ರೈತರು ಯಾರು , ಯಾರು ರೈತರಲ್ಲ ಎಂದು ತಿಳಿಯುತ್ತದೆ ಎಂದು ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆಲೋಗೆಡ್ಡೆಯಿಂದ ಶ್ರೀಮಂತರಾದವರು ಎಂದು ಹರಿಹಾಯ್ದರು.

ಸಂಸದರ ಮೇಲಿನ ಟೀಕೆಗಳಿಗೆ ನಮ್ಮ ಬಳಿ ಉತ್ತರ ಇಲ್ಲ.  ಕೆಲಸ ಮಾಡುವುದೇ ನಮ್ಮ ಗುರಿ. ನೆರೆ ಪರಿಹಾರ ಈಗಾಗಲೇ ಬಿಡುಗಡೆಯಾಗಿದೆ. ಎರಡನೇ ಕಂತು ಮತ್ತು ಮೂರನೇ ಕಂತು ಸಹ ಬಿಡುಗಡೆಯಾಗುತ್ತದೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Key words: mysore-Shobha Karandlaje- former CM HD Kumaraswamy