ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ..

ಮೈಸೂರು,ಮಾರ್ಚ್,1,2022(www.justkannada.in):  ನಾಡಿನೆಲ್ಲಡೆ ಇಂದು ಮಹಾ ಶಿವರಾತ್ರಿ ಸಂಭ್ರಮವಾಗಿದ್ದು ಸಾಂಸ್ಕೃತಿಕ ನಗರ ಮೈಸೂರಿನಲ್ಲೂ ಶಿವರಾತ್ರಿ ಸಡಗರ ಕಳೆಗಟ್ಟಿದೆ. ಈ ಮಧ್ಯೆ  ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ.

ಅರಮನೆ ಆವರಣದ ತೃನೇಶ್ವರ ದೇವಾಲಯದಲ್ಲಿ ರಾಜವಂಶಸ್ಥ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುತ್ರ ಆದ್ಯವೀರ್ ಜೊತೆ ವಿಶೇಷ ಪೂಜೆ ಸಲ್ಲಿಸಿದರು. ರಾಜವಂಶಸ್ಥರು ಸಾಂಪ್ರದಾಯಕ ಉಡುಗೆ ತೊಟ್ಟು ಪರಮೇಶ್ಚರನ ದರ್ಶನ ಪಡೆದರು.

ಶಿವರಾತ್ರಿ ಅಂಗವಾಗಿ ಹಲವೆಡೆ ಪ್ರಸಾದ ವಿತರಣೆ ಮಾಡಲಾಗುತ್ತಿದ್ದು, ಅರಮನೆ ಆವರಣ ತೃನೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಪ್ರಸಾದ ವಿತರಣೆ ಮಾಡಿದರು. ೀ ಹಿಂದೆ ಸುಳ್ವಾಡಿ ದುರಂತ ಪ್ರಕರಣ ಹಿನ್ನಲೆ. ಸಾರ್ವಜನಿಕರ ದೇವಾಲಯಗಳ ಪ್ರಸಾದ ವಿತರಣೆ ಬಗ್ಗೆ ನಿಗಾ ವಹಿಸಲಾಗಿದ್ದು, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಪ್ರಸಾದ ವಿತರಣೆ ಪರಿಶೀಲನೆ ನಡೆಸಲಾಯಿತು. ಮೈಸೂರಿನ ಹಲವು ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ನಡುವೆ ಪ್ರಸಾದಕ್ಕೆ ಬಳಸುವ ವಸ್ತುಗಳ ಮಾಹಿತಿ ಪಡೆದರು.

ರಾಮಲಿಂಗೇಶ್ವರ ದೇವಾಲಯದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಪೂಜೆ.

ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಾಲಯದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ವಿಜಯಾನಂದ ತೀರ್ಥಶ್ರೀಗಳಿಂದ ವಿಶೇಷ ಪೂಜೆ ನೆರವೇರಿತು.

ರಾಮಲಿಂಗೇಶ್ವರ ದೇವರಿಗೆ ಗಂಗಾಜಲ ಅಭಿಷೇಕ ಮಾಡಲಾಯಿತು. ಶಿವರಾತ್ರಿ ಅಂಗವಾಗಿ 16ನದಿಗಳ ತೀರ್ಥಗಳ ಜೊತೆಗೆ ರಾಮಪಾದುಕೆ ಮೆರವಣಿಗೆ ನಡೆಸಲಾಗುತ್ತಿದ್ದು, ಇಂದಿನಿಂದ 20ದಿನಗಳ ಕಾಲ ಮೆರವಣಿಗೆ ನಡೆಲಿದ್ದು ಈ ಮೆರವಣಿಗೆಗೆ ಶಾಸಕ ಎಸ್ ಎ ರಾಮದಾಸ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪಾಲಿಕೆ ಸದ್ಯಸ್ಯರು ಸೇರಿ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ಮಹಾ ಶಿವರಾತ್ರಿ  ಅಂಗವಾಗಿ ನಗರದ ಶಿಲ್ಪಿ ಸಿದ್ದಲಿಂಗಸ್ವಾಮಿ ಮಠದಲ್ಲಿರುವ  101 ಲಿಂಗಗಳಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಹಾಲು, ಮೊಸರು, ತುಪ್ಪದ ಅಭಿಷೇಕ ಮಾಡಲಾಗಿದ್ದು, ನಾಳೆ ಮುಂಜಾನೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು  ದೇವರ ದರ್ಶನ ಪಡೆದರು.

ನಂಜನಗೂಡು ನಂಜುಂಡೇಶ್ವರ ಸನ್ನಿಧಿಯಲ್ಲಿ ಕಳೆಗಟ್ಟಿದ ಮಹಾಶಿವರಾತ್ರಿ.

ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಯಾಗಿರುವ ನಂಜನಗೂಡು ನಂಜುಂಡೇಶ್ವರ ಸನ್ನಿಧಿಯಲ್ಲೂ ಮಹಾಶಿವರಾತ್ರಿ ಸಂಭ್ರಮ ಕಳೆಗಟ್ಟಿದ್ದು, ಹಬ್ಬದ ಪ್ರಯುಕ್ತ ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಮುಂಜಾನೆಯಿಂದ ಅಭಿಷೇಕ ಆರಂಭವಾಗಿದ್ದಿ, ಹುಷಿಕಾಲ ಪೂಜೆ, ಕ್ಷೀರಾಭೀಷೇಕ, ಫಲಪಂಚಾಮೃತಾಭಿಷೇಕ, ಮಹನ್ಯಾಸಪೂರ್ವಕವಾಗಿ ರುದ್ರಾಭಿಷೇಕ, ಬಳಿಕ ಒಂಭತ್ತು ಘಂಟೆಗೆ ಪ್ರಾತಃಕಾಲ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಜಾಗರಣೆಗಾಗಿ ಸಕಲ ಸಿದ್ದತೆ ಮಾಡಲಾಗಿದ್ದು, ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿದೆ.

Key words: mysore-shivaratri-festival-celebration