ಪರಿಶಿಷ್ಟ ಪಂಗಡದ ಪ್ರಮುಖರ ಸಭೆ :  ಸಚಿವ ಜಾರಕಿಹೊಳಿ ʼ ನಾಯಕʼ ತ್ವದಲ್ಲಿ  ಅವಳಿ ಜಿಲ್ಲೆ ಕೈ ಅಭ್ಯರ್ಥಿ ಬೆಂಬಲಿಸಲು  ನಿರ್ಧಾರ.

Meeting of Scheduled Tribe leaders: under the leadership of Minister Sathish Jarkiholi, nayaka community members decides to support the twin district congress candidate.

 

ಮೈಸೂರು, ಏ.13, 2024  : (www.justkannada.in news )  ಧರ್ಮ ರಕ್ಷಣೆ ಹೆಸರಿನಲ್ಲಿ ಅಧಿಕಾರ ಮಾಡುವವರಿಗಿಂತ ಬದುಕಿನ ರಕ್ಷಣೆ ಮಾಡುವವರು ಮುಖ್ಯ. ಗ್ಯಾರಂಟಿ ಯೋಜನೆಗಳಿಂದ ಎಸ್‌ಸಿ, ಎಸ್ಟಿ, ಹಿಂದುಳಿದ ವರ್ಗಗಳ ಜನರ ಬದುಕು ಹಸನಾಗಿರುವ ಕಾರಣ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ನಡೆದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡದ ಮುಖಂಡರ ಸಭೆಯನ್ನು  ಉದ್ಘಾಟಿಸಿ ವಾತನಾಡಿದರು.

ಧರ್ಮ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಹೊಸದಿಲ್ಲಿಯಲ್ಲಿ ಕುಳಿತು ಕೊಳ್ಳುವ ಕೆಲಸ ಬಿಟ್ಟರೆ ಈತನಕ ಬೇರೇನೂ ಇಲ್ಲ. ಅವರ ಧರ್ಮದ ಕೆಲಸಕ್ಕಿಂತ,  ನಮ್ಮ ರಕ್ಷಣೆ ಮಾಡುವುದು ಮುಖ್ಯ.ನಾವು ಬದುಕಬೇಕು. ನಾವು ಬದುಕಿದರೆ ದೇಶ ಉಳಿಯಲಿದೆ ಎನ್ನುವುದನ್ನು ಅರಿಯಬೇಕು ಎಂದರು.

ಕಾಂಗ್ರೆಸ್ ಪಕ್ಷಕ್ಕೆ ನಾಯಕ ಸಮಾಜ ಬೆಂಬಲ ನೀಡಬೇಕು. ಸರ್ಕಾರದ ಮುಂದೆ ಸಮಸ್ಯೆ ಗಳ ಬೆಳಕು ಚೆಲ್ಲಬೇಕು. ಸಮಾಜದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎನ್ನುವ ಜತೆಗೆ ಸರ್ಕಾರದಿಂದ ಅಗತ್ಯ ಸವಲತ್ತುಗಳು ದೊರೆತಿವೆ ಎಂಬುದನ್ನು ಮರೆಯಬಾರದು . ಮುಂದೆಯೂ ಸರ್ಕಾರದ ಕೆಲಸಗಳು ಜನರ ಗಮನಕ್ಕೆ ಬರುವಂತೆ ಮಾಡಬೇಕು. ಸ್ವಾತಂತ್ರ್ಯ ಬಂದ ದಿನದಿಂದಲೂ ಕಾಂಗ್ರೆಸ್ ಬೆಂಬಲಿಸಿಕೊಂಡು ಬರಲಾಗಿದೆ. ಕಾರಣಾಂತರಗಳಿಂದ ಬಿಜೆಪಿ ಮತ್ತು ಜಾ.ದಳವನ್ನು ಬೆಂಬಲಿಸಿದರೂ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿಸಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಅನುದಾನ ಮೀಸಲಿಡಲಾಗಿದ್ದು, ಎಸ್‌ಟಿ ವರ್ಗದವರಿಗೆ ೭೫೦೦ ಕೋಟಿ ರೂ. ನೀಡಲಾಗಿದೆ. ಕೆಎಐಡಿಬಿಯಲ್ಲಿ  ಶೇ.೫೦ ರಷ್ಟು  ರಿಯಾಯಿತಿ ದರದಲ್ಲಿ ಭೂಮಿ ನೀಡಲಾಗುತ್ತಿದೆ. ಕೆಎಸ್‌ಎಫ್‌ಸಿಯಲ್ಲಿ ಹತ್ತು ಕೋಟಿ ರೂ. ಸಾಲ ನೀಡುತ್ತಿರುವುದರಿಂದ ಈ ಸಮಾಜ ಕೈಗಾರಿಕೋದ್ಯಮಿಗಳಾಗುತ್ತಿದ್ದಾರೆ ಎಂದರು.

ಮೈಸೂರು ಭಾಗದವರನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಕಾಂಗ್ರೆಸ್‌ನ ಎಲ್ಲಾ ಶಾಸಕರು ಒಟ್ಟಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಸಿಗುವ ಅವಕಾಶವನ್ನು ಬಳಸಿಕೊಂಡು ಹೆಜ್ಜೆ ಹಾಕಬೇಕು. ಸಮುದಾಯ ಕಟ್ಟುವುದು ಮತ್ತು ರಾಜಕೀಯ ಮಾಡುವುದು ಬೇರೆಯಾಗಿದೆ.  ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಗೆಲ್ಲುವ ಕೆಲಸ ಮಾಡಬೇಕು. ಸಮುದಾಯದ ಪ್ರಾಬಲ್ಯ ತೋರಬೇಕು. ಸಂವಿಧಾನಕ್ಕೆ ಅಪಾಯ ಬಂದಾಗ ಅದನ್ನು ಕಾಪಾಡಲು ನಾವು ನಿಲ್ಲಬೇಕಿದೆ ಎಂದು ಕರೆ ನೀಡಿದರು.

ಶಾಸಕ ಅನಿಲ್ ಚಿಕ್ಕವಾದು ಮಾತನಾಡಿ, ನಾಯಕ ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಮುಗಿದ ಬಳಿಕ ಮತ್ತೊಂದು ಸಭೆ ಕರೆಯಲಾಗುವುದು. ಚಿಕ್ಕಮಾದು ಅವರ ಕಾಲದಿಂದಲೂ ಎರಡು ಜಿಲ್ಲೆಯೂ ಸಮಾಜದ ಪರವಾಗಿ ನಿಂತಿರುವುದನ್ನು ಮುಂದುವರಿಸಿಕೊಂಡು ಬರಲಾಗಿದೆ. ಸಿದ್ಧರಾಮಯ್ಯ  ಅವರು ಮೈಸೂರು ಜಿಲ್ಲೆಯವರೇ ಆಗಿರುವ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸಿದ್ಷರಾಮಯ್ಯ  ಸರ್ಕಾರದಲ್ಲಿ ಮೂವರಿಗೆ ಸಚಿವ ಸ್ಥಾನ, ಆರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೊಡಲಾಗಿದೆ. ಬೆಳಗಾವಿುಯಲ್ಲಿ ಬೆನ್ನಿಗೆ ನಿಂತಿರುವ ರೀತಿಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ಜನ ಜತೆಗೆ ನಿಲ್ಲಬೇಕು. ನಾಯಕ ಸಮಾಜಕ್ಕೆ ಹಲವಾರು ಯೋಜನೆಗಳನ್ನು ನೀಡಲಾಗಿದೆ. ನಾಯಕ ಸಮಜಾದಿಂದ ಮುಖ್ಯಮಂತ್ರಿ ಆಗುವ ಅವಕಾಶ ಇರುವುದರಿಂದ ತಮ್ಮ ನೇತೃತ್ವದಲ್ಲಿ ಬೆಂಬಲಿಸುವ ಕೆಲಸ ಮಾಡುತ್ತೇವೆ ಎಂದು ನುಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು ಮಾತನಾಡಿ, ಸಮಾಜದ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಭೆ ನಿಗದಿಯಾಗಿತ್ತಾದರೂ  ಕಾರಣಾಂತರಗಳಿಂದ ನಡೆಸಲಾಗಿರಲಿಲ್ಲ. ನಾಯಕ ಸಮಾಜ ಬಹುಸಂಖ್ಯಾತ ವರ್ಗವಾದರೂ ಸಮಸ್ಯೆಗಳು ಬೇಕಾದಷ್ಟಿದೆ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.  ಅನೇಕರು ಪರಿಹಾರ ವಾಡಲು ಪ್ರಯತ್ನಿಸಿದರೂ ಈತನಕ ಈಡೇರಿಲ್ಲ. ಮೈಸೂರು ಭಾಗದ ನಾಯಕ ಸಮಾಜ ಸತೀಶ್ ಜಾರಕಿಹೊಳಿ ಅವರ ನಾಯಕತ್ವವನ್ನು ನಂಬಿದೆ ಎಂದು ನುಡಿದರು.

ಮುಖಂಡರಾದ  ಕೆಲ್ಲಂಬಳ್ಳಿ ಶ್ರೀನಿವಾಸ ನಾಯಕ,  ರಮ್ಮನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು ಹಾಗೂ ಪರಿಶಿಷ್ಟ ಪಂಗಡದ ಮುಖಂಡರು ಹಾಜರಿದ್ದರು.

key words : Mysore, sc-st, meeting, Sathish jarakiholi, Karnataka, congress

summary :

Meeting of Scheduled Tribe leaders: under the leadership of Minister  Sathish Jarkiholi, nayaka community members  decides to support the twin district congress  candidate