ಮೈಸೂರಿನ ಸಾರಾ ಕನ್ವೆನ್ಷನ್ ಹಾಲ್ ‘ ರಾಜ ಕಾಲುವೆ ‘ ವಿವಾದ : ಪರಿಶೀಲಿಸಲು ಮುಂದಾದ ಪ್ರಾದೇಶಿಕ ಆಯುಕ್ತರು.

ಮೈಸೂರು, ಜೂ.10, 2021 : (www.justkannada.in news ) ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ ದಾಖಲೆಗಳನ್ನು ಪರಿಶೀಲಿಸುವೆ ಎಂದು ಪ್ರಾದೇಶಿಕ ಅಯುಕ್ತ ಜಿ.ಸಿ. ಪ್ರಕಾಶ್ ಆಶ್ವಾಸನೆ ನೀಡಿದರು.
ಶಾಸಕ ಸಾ.ರಾ. ಮಹೇಶ್ ಧರಣಿ ಸ್ಥಳಕ್ಕೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ಅವರಿಂದ ಆಶ್ವಾಸನೆ.
ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕನ್ವೆನ್ಷನ್ ಹಾಲ್, ರಾಜ ಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ರೋಹಿಣಿ ಸಿಂಧೂರಿ ಮಾಧ್ಯಮಗಳಿಗೆ ಬುಧವಾರ ದಾಖಲೆ ಬಿಡುಗಡೆ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಶಾಸಕ ಸಾ.ರ.ಮಹೇಶ್ ಅವರು ಸಿಂಧೂರಿ ನಡೆ ಖಂಡಿಸಿ ಏಕಾಂಗಿ ಪ್ರತಿಭಟನೆಗೆ ಮುಂದಾಗಿದ್ದರು.
ಶಾಸಕ ಸಾ.ರಾ‌. ಮಹೇಶ್ ಅವರ ಅಹವಾಲು ಆಲಿಸಿದ ಪ್ರಾದೇಶಿಕ ಆಯುಕ್ತರು ಹೇಳಿದಿಷ್ಟು..
ಈಗಾಗಲೇ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಎಲ್ಲಾ ರೆವಿನ್ಯೂ ದಾಖಲೆಗಳನ್ನ ಪರಿಶೀಲಿಸಿ‌ ಏನಾದರು ರಾಜಕಾಲುವೆ ಒತ್ತವರಿಯಾಗಿದೆಯೇ ಎಂದು ವರದಿ ನೀಡಲು ಸೂಚಿಸಿರುವೆ. ನಾನೂ ಕೂಡ ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಎಲ್ಲವನ್ನೂ ಸರ್ವೆ ಮಾಡಿ ದಾಖಲೆ ಪರಿಶೀಲನೆ ನಡೆಸುವೆ. ಇನ್ನು ಮೂರು ದಿನದಲ್ಲಿ ಸಮಿತಿಯಿಂದ ವರದಿ ಪಡೆದು ಬಳಿಕ‌ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದರು.

key words : mysore-sa.ra.mahesh-dattagalli-convention-hall-protest-r.c.office-rohini-sindhuri