ಸಾರಾ. ಕಲ್ಯಾಣ ಮಂಟಪ ಜಾಗದ ಒತ್ತುವರಿ ವಿವಾದ : ಇಂದು ಎಡಿಸಿ ಅವರಿಂದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ..?

ಮೈಸೂರು, ಜೂ.14, 2021 : (www.justkannada.in news) : ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಒಡೆತನದ ಸಾರಾ. ಕಲ್ಯಾಣ ಮಂಟಪ ಜಾಗದ ಒತ್ತುವರಿ ವಿವಾದ. ಇಂದು ಎಡಿಸಿ ಮಂಜುನಾಥಸ್ವಾಮಿ ಅವರಿಂದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ ಸಾಧ್ಯತೆ.jk
ಸಾರಾ ಕನ್ವೆನ್ಷನ್ ಹಾಲ್ ರಾಜಕಾಲುವೆಯನ್ನು ಭೂ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂದು ವರ್ಗಾಯಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೀಡಿದ್ದ ಹೇಳಿಕೆ ಹಿನ್ನೆಲೆ, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದ ಶಾಸಕ ಸಾರಾ ಮಹೇಶ್. ಒತ್ತುವರಿಯಾಗಿದ್ರೆ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಮಾತನಾಡಿದ್ದರು.
ಈ ವಿವಾದದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ನಡೆಸಲು ತಂಡ ರಚಿಸಿದ್ದ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್. ಇದೀಗ ಸರ್ವೆ ಕಾರ್ಯ ಮುಗಿದಿದ್ದು ವರದಿ ಅಂತಿಮಗೊಂಡಿದೆ. ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ನಂತರ ಅಲ್ಲಿಂದ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಗೆ ವರದಿ ರವಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.

key words : mysore-sa.ra.convention-hall-raja-kaluve-enchrochment-allegation