ಮೈಸೂರಿನಲ್ಲಿ ಇನ್ಮುಂದೆ ಮಾಸ್ಕ್ ಧರಿಸದಿದ್ರೆ 200 ರೂ ದಂಡ…

ಮೈಸೂರು,ಜು,1,2020(www.justkannada.in):  ಮೈಸೂರಿನಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸದೇ ಓಡಾಡುವವರಿಗೆ ಇನ್ಮುಂದೆ ದಂಡ ಬೀಳಲಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್,  ಶುಕ್ರವಾರದಿಂದ ಮಾಸ್ಕ್ ಧರಿಸದಿದ್ರೆ 200ರೂ  ದಂಡ ಹಾಕಲಾಗುತ್ತದೆ. ಹಾಗೆಯೇ ಗ್ರಾಮಾಂತರ ಭಾಗದಲ್ಲಿ 100ರೂ ದಂಡ ವಿಧಿಸಲಾಗುತ್ತದೆ. ಎಲ್ಲ ಎಪಿಎಂಸಿ ಹಾಗೂ ಮಾರುಕಟ್ಟೆಗಳಿಗು ಈ‌ ಕಾನೂನು ಅನ್ವಯವಾಗುತ್ತದೆ. ಪಾಲಿಕೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.mysore-rs-200-fine-penalty-mask-minister-st-somashekar

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ನಾಮನಿರ್ದೇಶನ ಸದಸ್ಯರು ಕ್ರಾಸ್ ವೋಟಿಂಗ್ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್, ಸಂಖ್ಯಾ ಬಲ ಇರೋ  ಅಧಿಕಾರಕ್ಕೆ ತರೋಕ್ಕೆ ವೋಟಿಂಗ್ ಮಾಡ್ತಾರೆ. ಎಲ್ಲಿ ಸಂಖ್ಯಾ ಬಲ ಇರೋಲ್ಲ ಅಲ್ಲಿ ಉತ್ತಮ ಆಡಳಿತ ನಡೆಸೋರಿಗೆ ಬೆಂಬಲ ನೀಡಿರಬಹುದು. ಈಗಷ್ಟೇ ಬಂದಿದ್ದೇನೆ ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

Key words: Mysore- Rs 200 Fine-penalty – mask-minister- st somashekar