ಮೈಸೂರಿನಲ್ಲಿ ಮತ್ತೆ ಸರಗಳ್ಳರ ಕೈ ಚಳಕ: ಇಬ್ಬರು ಮಹಿಳೆಯರ ಚಿನ್ನದ ಸರ ಕಸಿದು ಖದೀಮರು ಪರಾರಿ…

ಮೈಸೂರು,ಆ,6,2019(www.justkannada.in):  ಮೈಸೂರಲ್ಲಿ ಮತ್ತೆ ಸರಗಳ್ಳರು ಕೈ ಚಳಕತೋರಿದ್ದು  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ  ಇಬ್ಬರು ಮಹಿಳೆಯರ ಸರ ಕಸಿದು ಖದೀಮರು ಪರಾರಿಯಾದ  ಘಟನೆ ನಡೆದಿದೆ.

ನಗರದ ನಜರಬಾದ್ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಿದ್ದಾರ್ಥ ನಗರದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಉಮಾಶಂಕರಿ(55) ಎಂಬ  ಮಹಿಳೆಯ 25 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಈ ಕುರಿತು ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಎಸ್.ಎಸ್.ಲೇ ಔಟ್ ಬಳಿಯೂ ಇದೇ ರೀತಿ ಕೃತ್ಯ ನಡೆದಿದೆ.  ಖದೀಮರು ಮಂಜುಳಾ(60)  ಎಂಬ ವೃದ್ಧೆಯ 35 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ವೃದ್ಧೆ ನಗರದಿಂದ ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ  ಈ ಕೃತ್ಯ ನಡೆದಿದೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  Mysore –robbery- goldchain-escapes